Ad imageAd image

ಲಾಲ್ ಬಹುದ್ದೂರ್ ಶಾಸ್ತ್ರಿಯ ಮರಣ ಕೊಲೆ?

Bharath Vaibhav
ಲಾಲ್ ಬಹುದ್ದೂರ್ ಶಾಸ್ತ್ರಿಯ ಮರಣ ಕೊಲೆ?
WhatsApp Group Join Now
Telegram Group Join Now

ಅಂಕಣ ಬರಹ

ಅಂದು 1996 ತಮಿಳುನಾಡಿನಲ್ಲಿ ಸೇತುವೆ ಒಂದು ಕುಸಿದು ರೈಲ್ವೆ ಅಪಘಾತ ಉಂಟಾಯಿತು ಆ ಸಮಯದಲ್ಲಿ ರೈಲ್ವೆ ಖಾತೆ ಮಂತ್ರಿ ಆಗಿದ್ದವರು ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಇದರಿಂದ ಮನನೊಂದ ಶಾಸ್ತ್ರಿಜಿಯವರು ತಮ್ಮ ರೈಲ್ವೆ ಖಾತೆಗೆ ರಾಜೀನಾಮೆ ನೀಡಿದರು. ಸರ್ಕಾರಿ ವಾಹನವನ್ನು ಬಿಟ್ಟು ರಸ್ತೆಯಲ್ಲಿ ನಡೆದುಕೊಂಡು ಹೊರಟಾಗ ಕಾರಿನ ಚಾಲಕ ನಿಮಗೆ ಮನೆಗೆ ಬಿಟ್ಟು ಬರುತ್ತೇನೆ ಎಂದಾಗ ಶಾಸ್ತ್ರಿಯವರು ಹೇಳುತ್ತಾರೆ ನಾನು ಈಗ ಮಂತ್ರಿಯಲ್ಲಪ್ಪ ನಾನು ಈ ದೇಶದ ಸಾಮಾನ್ಯ ಪ್ರಜೆ ಎಂದು. ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಆ ಅಪಘಾತಕ್ಕೆ ಹೊಣೆ ಹೊತ್ತು ರಾಜೀನಾಮೆ ನೀಡಿದ್ದು ಅಪರೂಪ . ಇಂಥ ಮೌಲ್ಯಾಧಾರಿತ ಮಹಾನ್ ವ್ಯಕ್ತಿಯಾದ ಲಾಲ್ ಬಹದ್ದೂರ್ ಶಾಸ್ತ್ರಿಗಳ ಸಂಸ್ಮರಣಾ ದಿನ. ಅವರು ನಿಧನರಾದದ್ದು 1966 ವರ್ಷದ ಜನವರಿ 11ರಂದು.

ಲಾಲ್ ಬಹಾದ್ದೂರರು ಮೊಘಲ್‌ಸಾರಾಯ್‌ನಲ್ಲಿ 1904ರ ಅಕ್ಟೋಬರ್ 2ರಂದು ಜನಿಸಿದರು. 1921ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಓದನ್ನು ಅರ್ಧದಲ್ಲೇ ಬಿಟ್ಟರು. 1926ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾಪೀಠದಿಂದ ಸಂದಿತು. ಒಟ್ಟು ೧೯ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಶಾಸ್ತ್ರೀಜಿ ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ 1946ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.

ಸ್ವಾತಂತ್ರ್ಯಾನಂತರದಲ್ಲಿ ಗೋವಿಂದ ವಲ್ಲಭ ಪಂತ್ ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದ ಶಾಸ್ತ್ರೀಜಿ, 1951ರಲ್ಲಿ ಲೋಕಸಭೆಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಜೊತೆಗೆ ರೈಲ್ವೆ ಖಾತೆಯನ್ನೂ ನಿರ್ವಹಿಸಿದರು. ಅರಿಯಳೂರು ಬಳಿ ಸಂಭವಿಸಿದ ರೈಲ್ವೆ ದುರಂತದ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದೆ ಸಾರಿಗೆ ಮಂತ್ರಿಯಾಗಿದಾಗ ಪ್ರಥಮ ಮಹಿಳೆಯರಿಗೆ ನಿರ್ವಾಹಕ ಹುದ್ದೆಯನ್ನು ಮಂಜೂರಾತಿ ಮಾಡಿದರು ಮತ್ತು 1961ರಲ್ಲಿ ಗೃಹ ಮಂತ್ರಿಯಾಗಿದಾಗ ಪ್ರತಿಭಟನಾಕಾರರನ್ನು ಚದುರಿಸಲು ಲಾಟಿ ಚಾರ್ಜ್ ಮತ್ತು ಕಠಿಣ ಕ್ರಮ ವಹಿಸುವುದನ್ನು ತಪ್ಪಿಸಿ ಪ್ರತಿಭಟನಕಾರರ ಮೇಲೆ ಮೃದುವಾದ ವಾಟರ್ ಜೆಟ್ ಪ್ರಯೋಗಿಸಲು ಜಾರಿಗೆ ತಂದರು.1964ರಲ್ಲಿ ಜವಾಹರ್‌ಲಾಲ್ ನೆಹರು ಅವರು ಸಾವನ್ನಪ್ಪಿದಾಗ ಕಾಂಗ್ರೆಸ್‌ನಲ್ಲಿ ಹಲವಾರು ಪ್ರತಿಸ್ಪರ್ಧಿಗಳು ಉದ್ಭವಗೊಂಡ ಹಿನ್ನಲೆಯಲ್ಲಿ ಅತ್ಯಂತ ಸರಳರೂ, ಅಧಿಕಾರದ ಬಗ್ಗೆ ಯಾವುದೇ ವ್ಯಾಮೋಹಗಳಿಲ್ಲದವರೂ ಆದ ಶಾಸ್ತ್ರಿಯವರು ಪ್ರಧಾನಿಯಾಗಿ ಮೂಡಿಬಂದರು.

ಶಾಸ್ತ್ರೀಜಿಯವರ ಆಡಳಿತ ಕಾಲದಲ್ಲಿ ಪಾಕಿಸ್ತಾನದೊಂದಿಗೆ ಯುದ್ಧಗಳು, ಭಾರತದಲ್ಲಿ ತಲೆದೋರಿದ್ದ ಬರಗಾಲ, ಕ್ಷಾಮ ಪರಿಸ್ಥಿತಿಗಳು ಮತ್ತು ಅದನ್ನು ಶಾಸ್ತ್ರೀಜಿಯವರು ಧೈರ್ಯದಿಂದ ಎದುರಿಸಿದ ಮಾತುಗಳನ್ನು ನಾವು ಸಾಕಷ್ಟು ಕೇಳಿದ್ದೇವೆ. ಇವುಗಳಲ್ಲಿ ಎದ್ದು ಕಾಣುವ ಗುಣವೆಂದರೆ ಅವರಲ್ಲಿದ್ದ ಪ್ರಾಮಾಣಿಕತೆ, ಸರಳತೆ ಮತ್ತು ಯಾವುದೇ ಪರಿಸ್ಥಿತಿಯಲ್ಲೂ ಧೃತಿಗೆಡದೆ ನಿಷ್ಠೆಯಿಂದ ಹಗಲಿರುಳೂ ದುಡಿಯುವ ಅಪ್ರತಿಮ ಗುಣ. ಪ್ರಾಮಾಣಿಕತೆ ಎಂಬ ವಿಚಾರ ಬಂದಾಗ ಭಾರತೀಯರಿಗೆ ಪ್ರಧಾನವಾಗಿ ಕಾಣುವ ವ್ಯಕ್ತಿ ಎಂದರೆ ಲಾಲ್ ಬಹದ್ದೂರ್ ಶಾಸ್ತ್ರಿಯವರು ಎಂದರೆ ತಪ್ಪಾಗಲಾರದು.

ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನ ಮಂತ್ರಿಗಳಾಗಿದ್ದ ಸಂಧರ್ಭದಲ್ಲಿ ಒಮ್ಮೆ ಒಂದು ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ರದ್ದು ಮಾಡಬೇಕಾದ ಅನಿವಾರ್ಯ ಉಂಟಾಯಿತು. ಆ ರಾಜ್ಯದ ಮುಖ್ಯಮಂತ್ರಿ ಶಾಸ್ತ್ರೀಜಿಯವರಿಗೆ ದೂರವಾಣಿ ಕರೆ ಮಾಡಿ, “ಶಾಸ್ತ್ರೀಜಿ ದಯವಿಟ್ಟು ಕಾರ್ಯಕ್ರಮವನ್ನು ರದ್ದು ಮಾಡಬೇಡಿ. I have made first class arrangements for your visit” ಎಂದು ದೈನ್ಯತೆ ಪ್ರದರ್ಶಿಸಿದರು. ಶಾಸ್ತ್ರೀಜಿ, ಅಷ್ಟೇ ನಯವಾಗಿ ಹೇಳಿದರು, “why did you do first class arrangements for a third class man”. ಶಾಸ್ತ್ರೀಜಿ ಅವರು ಉನ್ನತ ಸ್ಥಾನದಲ್ಲಿದ್ದರೂ ಆ ಸ್ಥಾನದ ಬಗ್ಗೆ ಒಂದಿಷ್ಟೂ ಅಹಂಕಾರ ವ್ಯಾಮೊಹಗಳನ್ನು ಹೊಂದಿರಲಿಲ್ಲ.

ಅಂದಿನ ದಿನಗಳಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲಭಾರ ಅಧಿಕವಾಯಿತು. ಅದನ್ನರಿತ ಶಾಸ್ತ್ರೀಜಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹವಾಗುವುದೆಂದು ಲೆಕ್ಕಾಚಾರ ಹಾಕಿ ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟಪ್ರಾಯದಂತಿದೆ.
ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧದ ಶಾಂತಿ ಒಪ್ಪಂದಕ್ಕಾಗಿ ರಷ್ಯಾದ ನೇತೃತ್ವದಲ್ಲಿ ತಜಿಕಿಸ್ತಾನದ ತಾಸ್ಕೆಟ್ನಲ್ಲಿ ಒಪ್ಪಂದದ ಮಾತುಕತೆ ಮುಗಿದ ನಂತರ ರಾತ್ರಿ ಮಲಗಲು ತೆರಳಿದ ಶಾಸ್ತ್ರಿಜಿಯವರು ಮರುದಿನ ಹೇಳಲೇ ಇಲ್ಲ.

ಪ್ರಧಾನಮಂತ್ರಿಗಳ ಪ್ರಧಾನಮಂತ್ರಿಗಳಾದ ಶಾಸ್ತ್ರಿ ಜವರ ಪರ್ಸನಲ್ ಅಡಿಗೆ ಭಟ್ಟನಾದ ರಾಮನಾಥ್ ಕೊಟ್ಟ ಹಾಲನ್ನು ಕುಡಿದು ಮಲಗಿದ ಶಾಸ್ತ್ರೀಯ ಅವರು ರಾತ್ರಿ ಒಂದರ ಸಮಯಕ್ಕೆ ಎದ್ದು ಅವರ ಪರ್ಸನಲ್ ಡಾಕ್ಟರ್ರಾದ ಆರ್ . ಎನ್ ಚುಕ್ ಹತ್ತಿರ ತಮ್ಮ ಎದೆಯನ್ನು ಹಿಡಿದುಕೊಂಡು ಬಂದರು. ಆದರೆ ಅವರು ಅಲ್ಲೇ ಮಲಗಿ ಉಸಿರು ಚೆಲ್ಲಿದರು ಎಂಬುವ ವಾರ್ತೆ ಹರಡಿತು ದುರಂತವೆಂದರೆ ರಷ್ಯಾವು ಶಾಸ್ತ್ರೀಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಿಲ್ಲ ಅವರ ಸಾವುಗೆ ಒಂದು ಗುಮಾನಿ ಎಂದರೆ ಅವರ ದೇಹವನ್ನು ವಿಮಾನದಲ್ಲಿ ಭಾರತಕ್ಕೆ ತಂದಾಗ ಮದ್ಯಾಹ್ನ ಎರಡು ಗಂಟೆ ಅಷ್ಟರಲ್ಲಿ ಅವರ ದೇಹ ಮತ್ತು ಕುತ್ತಿಗೆ ಭಾಗ ನೀಲಿಮಯವಾಗಿತ್ತು.

1966ರ ಜನವರಿ 11ರಂದು ಶಾಸ್ತ್ರೀಜಿಯವರು ಅಸು ನೀಗಿದ ಸಂದರ್ಭದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಜನರ ನೂಕು ನುಗ್ಗಲು ಉಂಟಾಗಿ, ಪ್ರಧಾನಿ ನಿವಾಸದ ಮುಂದೆ ನಿಯಂತ್ರಿಸಲು ಅಸಾಧ್ಯ ಸ್ಥಿತಿ ತಲುಪಿತ್ತು. ಶಾಸ್ತ್ರೀಜಿ ಅವರ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ವರ್ ಪ್ರಸಾದ್ ಅವರು ಕಾವಲುಗಾರನನ್ನು ಕರೆದು ಏನಾದರೂ ತ್ವರಿತವಾಗಿ ಮಾಡು ಎಂದರು. ಆ ಕಾವಲುಗಾರ ಉತ್ತರಿಸಿದನಂತೆ. “ಸಾರ್ ಕ್ಷಮಿಸಿ, ಈ ಜನರು ಈ ಸತ್ತ ಮಹಾನು ಭಾವನಂತಲ್ಲ! ಈ ಮಹಾನುಭಾವನಾದರೋ ನಾನು ಏನೇ ಹೇಳಿದ್ದರೂ ಅದನ್ನು ತಕ್ಷಣವೇ ಪಾಲಿಸಿಬಿಡುತ್ತಿದ್ದರು ಎಂಬುದರಲ್ಲಿ ನನಗೆ ಕಿಂಚಿತ್ತೂ ಸಂದೇಹವಿಲ್ಲ. ಆದರೆ ಈ ಜನರಾದರೋ ನನ್ನ ಮಾತು ಕೇಳುವಂತಹವರಲ್ಲ.” ರಾಜೇಶ್ವರ ಪ್ರಸಾದ್ ಅವರು ಹೇಳುತ್ತಾರೆ, “ಇದು ಶಾಸ್ತ್ರೀಜಿ ಅವರ ಬಗ್ಗೆ ಇರುವ ಅತ್ಯಂತ ಹಿರಿಯ ಗೌರವಯುತ ವ್ಯಾಖ್ಯಾನ” ಎಂದು.

ಸುಮಾರು ವರ್ಷಗಳವರೆಗೂ ಶಾಸ್ತ್ರಿಜಿಯವರ ಸಾವಿನ ಬಗ್ಗೆ ಭಾರತ ಸರಕಾರವು ಮೌನವೇ ವಹಿಸಿತ್ತು ಇಂದಿರಾ ಗಾಂಧಿಯವರು ಪ್ರಧಾನಮಂತ್ರಿ ಆದ ನಂತರ ಒಂದು ಕಮಿಟಿಯನ್ನು ರಚಿಸಿದರು ಆ ಕಮಿಟಿಗೆ ಪ್ರಮುಖ ಸಾಕ್ಷಿ ದಾರರು ಯಾರೆಂದರೆ ಶಾಸ್ತ್ರಿಜಿಯವರ ಪರ್ಸನಲ್ ಡಾಕ್ಟರ್. ಆರ್. ಎನ್. ಚುಕ್ಕ ಅವರು ಆ ಸಮಿತಿಯ ಮುಂದೆ ಸಾಕ್ಷಿ ಹೇಳಲು ಬರುವಾಗ ಅವರ ಕಾರಿನ ಹಿಂದುಗಡೆ ಬಂದ ಟ್ರಕ್ ಅವರ ಕಾರಿನ ಮೇಲೆ ನೇರವಾಗಿ ಹತ್ತಿಸಿ ಅವರನ್ನು ಕೊಲ್ಲಲಾಯಿತು.

ನಂತರ ಎರಡನೇ ಸಾಕ್ಷಿಯಾಗಿದ್ದವರು ಅವರ ಅಡಿಗೆ ಸಾಯಕ ರಾಮನಾಥ್ ಅವನು ಸಾಕ್ಷಿ ಹೇಳಲು ಸಮಿತಿಯ ಮುಂದೆ ಬರುವಾಗ ಮತ್ತೆ ಒಂದು ಟ್ರಕ್ಕು ಕಾರಿನ ಮುಂಭಾಗ ಬಂದು ಡಿಕ್ಕಿ ಹೊಡೆದ ನಂತರ ಅವರು ಸ್ಥಳದಲ್ಲಿ ಮರಣ ಹೊಂದಿದರು ಇದರಿಂದಾಗಿ ಸಾಕ್ಷಿ ಆಧಾರಗಳ ಕೊರತೆಯಿಂದ ಆ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ನಿರಾಕರಿಸಿತು. ಇನ್ನೊಬ್ಬ ಸಾಕ್ಷಿ ದಾರನಾಗಿದ್ದ ಪರ್ಸನಲ್ ಅಸಿಸ್ಟೆಂಟ್ ಮೊಹಮ್ಮದ್ ಜಾನ್ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಮರಣದ ತರುವಾಯವು ನಾಪತ್ತೆಯಾಗಿ ಹೋಗಿದ್ದನು.
ಶಾಸ್ತ್ರೀಜಿಯವರ ಮರಣವು ಈಗಲೂ ಒಂದು ಚಿದಂಬರ ರಹಸ್ಯವಾಗಿ ಉಳಿದಿದೆ.

ಶಾಸ್ತ್ರೀಜಿ ಅವರು ನಿಧನರಾದಾಗ ಅವರ ಬ್ಯಾಂಕ್ ಖಾತೆಯಲ್ಲಿ ಇದ್ದದ್ದು ಬೆರಳೆಣಿಕೆಯಷ್ಟು ರೂಪಾಯಿಗಳು. ಅವರ ಬಳಿ ಎಂತಹದ್ದೂ ಆಸ್ತಿ ಇರಲಿಲ್ಲ ಎಂಬುದನ್ನು ಊಹಿಸುವುದೂ ಕಷ್ಟ. ಇಂತಹ ಮಹಾನುಭಾವ ನಮ್ಮ ಪ್ರಧಾನಿ ಆಗಿದ್ದರು ಎಂಬ ಹೆಮ್ಮೆ ನಮ್ಮದು.

ಲಾಲ್ ಬಹದ್ದೂರ್ ಶಾಸ್ತ್ರಿ ಅಂತಹ ಸಜ್ಜನರು, ಸಮರ್ಥರು, ಉತ್ತಮ ಹೃದಯಿಗಳು ನಮ್ಮ ನಾಯಕರಾಗಿ ಹೆಚ್ಚು ಹೆಚ್ಚು ಮೂಡಿ ಬಂದು ನಮ್ಮ ಈ ದೇಶಕ್ಕೆ ಭವ್ಯ ಭವಿತವ್ಯ ಮೂಡಿಸುವಂತಾಗಲಿ. ಶಾಸ್ತ್ರಿಜಿಯವರು ಮರಣದ ಬಗ್ಗೆ ಭಾರತ ಸರ್ಕಾರವು ಮೌನವೇ ವಹಿಸಿದ್ದು ವಿಪರಾಸವಾಗಿದೆ ದೇಶದ ಸ್ವತಂತ್ರ ಹೋರಾಟದಲ್ಲಿ ತಮ್ಮ ಜೀವನವನ್ನೇ ತೆತ್ತವರು ಶಾಸ್ತ್ರೀಯವರ ಸ್ಮರಣೆ ನಮಗೆ ಅತ್ಯವಶ್ಯವಾಗಿದೆ

ವರದಿ: ಸಾಯಬಣ್ಣ ಮಾದರ ಸಲಾದಹಳ್ಳಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!