Ad imageAd image

ಹುಸೇನ್ ಪುರದಲ್ಲಿ ಜಮೀನು ಎರಡು ಗುಂಪುಗಳ ನಡುವೆ ಗಲಾಟೆ: ಮೂವರ ಮೇಲೆ ಹಲ್ಲೆ

Bharath Vaibhav
ಹುಸೇನ್ ಪುರದಲ್ಲಿ ಜಮೀನು ಎರಡು ಗುಂಪುಗಳ ನಡುವೆ ಗಲಾಟೆ: ಮೂವರ ಮೇಲೆ ಹಲ್ಲೆ
WhatsApp Group Join Now
Telegram Group Join Now

ಪಾವಗಡ:ಜಮೀನು ವಿಚಾರವಾಗಿ ಹುಸೇನ್ ಪುರ ರೆಡ್ಡಿ ಸಮುದಾಯ ದಿಂದ ನಾಯಕ ಜನಾಂಗದವರ ಮೇಲೆ ಗ್ರಾಮದ ಹೊರವಲಯದ ಹೊಲದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ತಾಲ್ಲೂಕಿನ ಹುಸೇನ್ ಪುರ ಗ್ರಾಮದ ಸರ್ವೇ ನಂಬರ್ 60 ರಲ್ಲಿ 3 ಎಕರೆ ಜಮೀನನ್ನು ವೆಂಕಟರವಣಪ್ಪ ನವರ ಬಳಿ ಕಳೆದ 30 ವರ್ಷದ ಹಿಂದೆ ಕೊಂಡುಕೊಂಡಿದ್ದು. ಸುಮಾರು ವರ್ಷಗಳಿಂದ ಹೊಲದಲ್ಲಿ ಬೊರ್ವೆಲ್ ಹಾಕಿಸಿಕೊಂಡು ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಈಗ ಜಮೀನು ರಿಜಿಸ್ಟರ್ ಮಾಡಿಕೊಡಿ ಎಂದು ಕೆಳಿದಾಗ ವೆಂಕಟರವಣಪ್ಪ ರವರನ್ನು ಅಣ್ಣ ತಮ್ಮಂದಿರ ಮಕ್ಕಳು ಅಪಹರಿಸಿ ಜಮೀನು ರಿಜಿಸ್ಟರ್ ಮಾಡಿಕೊಡದಂತೆ ಮಾಡಿರುತ್ತಾರೆ.

ಈಗ ವೆಂಕಟರವಣಪ್ಪ ನವರ ಅಣ್ಣ ತಮ್ಮಂದಿರ ಮಕ್ಕಳಾದ ಅಂಜಿನ ರೆಡ್ಡಿ, ರಾಮಕೃಷ್ಣರೆಡ್ಡಿ, ಆದಿಲಕ್ಷ್ಮಮ್ಮ ನವರು ಆಂದ್ರದಿಂದ ಹದಿನೈದು‌ ಜನರ ಗುಂಪು ಕಟ್ಟಿಕೊಂಡು ಬಂದು. ಅಕ್ಕಮ್ಮ ಮೆಕ್ಕೆಜೋಳದ ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ಬಂದು ಏಕಾಏಕಿ ಗಲಾಟೆ ಮಾಡಿ ಮಕ್ಕಳಾದ ಮಾದವರಾಜು, ನರಸಿಂಹ ರವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡುವುದರ ಜೊತೆಗೆ ಚಪ್ಪಲಿಯಿಂದ ಹೊಡೆದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೂಪಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಮಣಿ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

ವರದಿ: ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!