ಚಿಕ್ಕೋಡಿ : ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಶ್ರೀ ಪ್ರಕಾಶ ಅಣ್ಣಾ ಹುಕ್ಕೇರಿ ಹಾಗೂ ಶಾಸಕರಾದ ಶ್ರೀ ಗಣೇಶ ಅಣ್ಣಾ ಹುಕ್ಕೇರಿ ಅವರ ಪ್ರಯತ್ನದಿಂದ ಮಂಜೂರಾದ 1.60 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಯಕ್ಸಂಬಾ ಪಟ್ಟಣದ ಹಳೆ ಅಂಕಲಿ ರಸ್ತೆ ದಿಂದ ಖೇತ್ರಿಬಾ, ನಾಯಿಕ, ಮಾನೆ, ಅವಟಿ ತೋಟಗಳ ಮಾರ್ಗವಾಗಿ ಫ್ಯಾಕ್ಟರಿ ರಸ್ತೆಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ವೇಳೆ ಯಕ್ಸಂಬಾ ಪಟ್ಟಣ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




