ಮೊಳಕಾಲ್ಮುರು: ಶಾಸಕ ಎನ್ ವೈ ಗೋಪಾಲಕೃಷ್ಣ ಗುರುವಾರದಂದು ತಮ್ಮೆನಹಳ್ಳಿ ಗ್ರಾಪಂ ವ್ಯಾಪ್ತಿಯ ಮುರುಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರೆವೇರಿಸಿದರು.
ಮುಖ್ಯ ರಸ್ತೆಯಿಂದ ಮುರುಡಿ ಮಾರ್ಗವಾಗಿ ಶಿರೇಕೋಳ ಕರಡಿಹಳ್ಳಿವರೆಗೆ ರಸ್ತೆ ಅಭಿವೃದ್ಧಿಯ ರೂ. 1.50 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು. ಶಾಸಕರು ಭೇಟಿ ನೀಡಿದ ಸಂಧರ್ಭದಲ್ಲಿ ಗ್ರಾಮಸ್ಥರು ವಿವಿಧ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರು.
ವಾಟರ್ ಫಿಲ್ಟರ್ ಬಳಿಯಿಂದ ಓವರ್ ಟ್ಯಾಂಕ್ ರವರೆಗೆ ಸಿ ಸಿ ರಸ್ತೆ ನಿರ್ಮಾಣ ಮತ್ತು ಸ್ಮಶಾನ ಜಾಗ ನೀಡುವಂತೆ ಮನವಿ ಮಾಡಿದರು. ಗ್ರಾಮಸ್ಥರ ಮನವಿ ಆಲಿಸಿದ ಶಾಸಕರು ನಾಳೆಯಿಂದಲೇ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಸ್ಥಳದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಸ್ಮಶಾನಕ್ಕೆ ಖಾಸಗಿ ಜಮೀನು ಕೊಡುವವರು ಇದ್ದರೇ ಪಹಣಿ ತೆಗೆದುಕೊಂಡು ನನ್ನ ಬಳಿ ಬನ್ನಿ ಸರ್ಕಾರದ ಬಳಿ ಚರ್ಚಿಸಿ ಮಂಜೂರಾತಿ ಮಾಡಿಸುತ್ತೇನೆ ಎಂದು ಹೇಳಿದರು.
ಸ್ಥಳದಲ್ಲಿ ತಮ್ಮೆನಹಳ್ಳಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ವೀರಣ್ಣ ಟಿ ಡಿ,ಮಾಜಿ ಗ್ರಾಪಂ ಅಧ್ಯಕ್ಷ ಡಿ ಎಲ್ ಗುರುಲಿಂಗಪ್ಪ,ಸದಸ್ಯರಾದ ಹೇಮಲತಾ ಮೃತ್ಯುಂಜಯ, ಜಿ ಎಚ್ ಈಶ್ವರಪ್ಪ, ವೆಂಕಟೇಶ್, ಪಟ್ಟಣ ಪಂಚಾಯತಿ ಸದಸ್ಯರು ಮತ್ತು ಗುತ್ತಿಗೆದಾರರಾದ ಎಸ್ ಖಾದರ್, ಗೋವಿಂದಪ್ಪ. ಲಕ್ಷ್ಮೀನಾರಾಯಣ. ಕಾಂಗ್ರೆಸ್ ಮುಖಂಡರು ಇನ್ನೂ ಹಲವರಿದ್ದರು.
ವರದಿ: ಪಿಎಂ ಗಂಗಾಧರ




