
ಚಿಕ್ಕೋಡಿ : ತಾಲೂಕಿನ ಕರೋಶಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೃಷ್ಣ ಹುಟ್ಟು ಹಬ್ಬದ ಆಚರಣೆ ಮಾಡಲಾಯಿತು. ಕರೋಶಿಯಲ್ಲಿ ಕೃಷ್ಣ ಫೋಟೋ ದೊಂದಿಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡುತ್ತ ಜನರ ಕುಣಿತ ಸಂತೋಷದೊಂದಿಗೆ ಈ ಕೃಷ್ಣ ಹುಟ್ಟು ಹಬ್ಬದ ಆಚರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಕರೋಶಿಯ ಹಿರಿಯ ಮುಖಂಡರು ಹಾಗೂ ಮಾಜಿ ಝೆಡ್ ಪಿ ಅಧ್ಯಕ್ಷರು ಹಾಗೂ ಪಿಕೆಪಿಎಸ್ ಅಧ್ಯಕ್ಷರಾದ ಶ್ರೀ ಮಹೇಶ್ ಭಾತೆ ಹಾಗೂ ಹನುಭರ ಸಮಾಜದ ಶ್ರೀ ಕೃಷ್ಣ ಮಂಡಳದವರ ನೇತೃತ್ವದಲ್ಲಿ ಈ ಹುಟ್ಟು ಹಬ್ಬದ ಆಚರಣೆಯನ್ನು ಎಲ್ಲಾ ಕೃಷಿ ಗ್ರಾಮದ ಕೃಷ್ಣ ಮಂಡಳಿ ಹಾಗೂ ನವ ಯುವಕರ ಉಪಸ್ಥಿತಿಯಲ್ಲಿ ಆಚರಿಸಲಾಯಿತು.
ವರದಿ: ರಾಜು ಮುಂಡೆ




