ಹುಮನಾಬಾದ :ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಯುವ ಸಮಾಜಕ್ಕೆ ಮಾದರಿಯಾಗಿದ್ದರು ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ ಹೇಳಿದ್ದಾರೆ.
ನಗರದ ಗೃಹ ಕಛೇರಿಯ ಆವರಣದಲ್ಲಿ ಶಾಮನೂರ ಶಿವಶಂಕರಪ್ಪ ಭಾವಚಿತ್ರಕೆ ಪುಶ್ಪನಮನ ಸಲಿಸುವ ಮುಖಾಂತರ ನಮನ ಸಲಿಸಿ ಮಾತನಾಡಿದರು.
ಜೀವನೋತ್ಸಾಹಕ್ಕೆ ಅವರ ವಯಸ್ಸು ಎಂದಿಗೂ ಅಡ್ಡಿಯಾಗಲಿಲ್ಲ,ಅವರ ಸಾರ್ಥಕ ಬದುಕು ಯುವ ಸಮಾಜಕ್ಕೆ ಎಂದಿಗೂ ಮಾದರಿಯಾಗಿರುವಂತಹದ್ದು.
ಪೂಜ್ಯ ತಂದೆ ದಿವಂಗತ ಬಸವರಾಜ ಪಾಟೀಲ್ ರವರೂಂದಿಗೆ ಅವರ ಒಡನಾಟ ಆತ್ಮೀಯತೆಯಿಂದ ಕೂಡಿತು.
ಶಿಕ್ಷಣ,ಆರೋಗ್ಯ ಕ್ಷೇತ್ರಗಳಿಗೆ ಶಾಮನೂರು ಶಿವಶಂಕರಪ್ಪನವರ ಕೊಡುಗೆ ಹಾಗೂ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ವಿಶಿಷ್ಠ ಹೆಜ್ಜೆಗುರುತುಗಳನ್ನು ಸಮಾಜದ ಭವಿಷ್ಯಕ್ಕಾಗಿ ಕಟ್ಟಿದ ಹಿರಿಮೆ ಅವರದ್ದಾಗಿದೆ.
ಅವರ ಅಗಲಿಕೆಯ ನಷ್ಟವನ್ನು ಭರಿಸುವ ಶಕ್ತಿಯು ಅವರ ಕುಟುಂಬಕ್ಕೆ,ಸಮಾಜಕ್ಕೆ ಹಾಗೂ ಅಪಾರ ಅಭಿಮಾನಿ ವರ್ಗಕ್ಕೆ ಸಿಗುವಂತಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ,ಅಫಸರ ಮಿಯ್ಯ,ಓಂಕಾರ ತುಂಬಾ,ಲಕ್ಷ್ಮಣರಾವ ಬುಳ್ಳ ಸೇರಿ ಅನೇಕರು ಇದ್ದರು.
ವರದಿ:ಸಜೀಶ್ ಲಂಬುನೋರ್




