ಸಿಂಧನೂರು : ಏಪ್ರಿಲ್ 22ರಂದು ನಗರದ ಡಾ. ಬಿ ಆರ್ ಅಂಬೇಡ್ಕರ್ ಕಾಲೋನಿಯ ಭೀಮ ಬಂಧುಗಳು ಡಾ. ಬಾಬು ಜಗಜೀವನ್ ರಾಮ್ ರವರ 118ನೇ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತ್ಯೋತ್ಸವವನ್ನು ವಾರ್ಡ್ ಮಟ್ಟದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು ಎಂದು ಅಂಬೇಡ್ಕರ್ ಯುವಕ ಮಂಡ್ಯ ಅಧ್ಯಕ್ಷ ಹನುಮಂತ ಕರ್ನಿ ತಿಳಿಸಿದರು.
ನಗರದ ಬಪ್ಪೂರ ರಸ್ತೆಯಲ್ಲಿರುವ ಬಾಬು ಜಗಜೀವನ್ ರಾಮ್ ರವರ ನಾಮಪಲಕಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಡಿಜೆ ಮೂಲಕ ಬಾಬಾ ಸಾಹೇಬರ ಗೀತೆಗಳು ಹಾಕಿ ಕುಣಿದು ಕುಪ್ಪಳಿಸಿತ್ತ ಕಲಾ ತಂಡಗಳೊಂದಿಗೆ ಸುಕಲಪೇಟಿಯ ಅಂಬೇಡ್ಕರ್ ಭವನದವರೆಗೆ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿತಂದು ಹಿರಿಯ ಮುಖಂಡರಾದ ಅಲ್ಲಮಪ್ರಭು ಪೂಜಾರಿ. ಹನುಮಂತ ಪನ್ನೂರು. ಯಮನಪ್ಪ ಬಿಎಸ್ಎನ್ಎಲ್. ಹುಸೇನಪ್ಪ ಬಾಲಿ. ಅಮರೇಶ್ ಗಿರಿಜಾಲಿ. ಹಸೇನಪ್ಪ ಸೂಲಂಗಿ. ದುರುಗೇಶ ಬಾಲಿ. ಹಾರೋನ್ ಪಾಷಾ ಜಾಗೀರ್ದಾರ್. ಗವಿಸಿದ್ದಪ್ಪ ನ್ಯಾಯಬೆಲೆ ಅಂಗಡಿ. ತಿಳಿಸಿದರು
ಯುವಕರಾದ ಮಹೇಶ್ ಅಂಬೇಡ್ಕರ್ ನಗರ. ಉಮೇಶ ಅಂಬೇಡ್ಕರ್ ನಗರ. ಮುತ್ತು ಸಾಗರ್. ಉದಯಕುಮಾರ್. ದುರ್ಗೇಶ್ ಸೂಲಂಗಿ. ಪ್ರದೀಪ್ ಪೂಜಾರಿ. ಉಮೇಶ್ ಬಲಿ. ಗಣೇಶ್ ಬಾಲಿ. ಸೇರಿದಂತೆ ಅಂಬೇಡ್ಕರ್ ಸೇವಾ ಸಮಿತಿ ಅಂಬೇಡ್ಕರ್ ಯುವಕ ಮಂಡಳಿ ಸದಸ್ಯರು ಮೆರವಣಿಯಲ್ಲಿ ಭಾಗವಹಿಸಿದ್ದರು.
ಬಸವರಾಜ ಬುಕ್ಕನಹಟ್ಟಿ