Ad imageAd image

ಅದ್ದೂರಿಯಾಗಿ ಉದ್ಘಾಟನೆ ಗೊಂಡ ವಲಯ ಮಟ್ಟದ ಕ್ರೀಡಾಕೂಟ

Bharath Vaibhav
ಅದ್ದೂರಿಯಾಗಿ ಉದ್ಘಾಟನೆ ಗೊಂಡ ವಲಯ ಮಟ್ಟದ ಕ್ರೀಡಾಕೂಟ
WhatsApp Group Join Now
Telegram Group Join Now

ಬೆಳಗಾವಿ :ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ವೀರಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಎಮ್.ಕೆ. ಹುಬ್ಬಳ್ಳಿ ವಲಯಮಟ್ಟದ ಕ್ರೀಡಾಕೂಟವನ್ನು ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದ ಚನ್ನಬಸಪ್ಪ ತುಭಾಕಿ ಹಾಗೂ ಸಿ.ಆರ್.ಪಿ ವಿನೋದ್ ಪಾಟೀಲ್ ಹಾಗೂ ಎಸ್.ಡಿ.ಎಂ.ಸಿ ಆಡಳಿತ ಮಂಡಳಿಯ ನೇತೃತ್ವದಲ್ಲಿ ಕ್ರೀಡಾಜ್ಯೋತಿ ಸ್ವಾಗತಿಸಿ ಅದ್ದೂರಿಯಾಗಿ ಉದ್ಘಾಟನೆ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕಿತ್ತೂರು ತಾಲ್ಲೂಕು ಎಸ್.ಎಸ್ .ಎಲ್.ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಲು ಶ್ರಮ ವಹಿಸಿ ಯಶಸ್ಸು ಕಂಡ ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದ ಚನ್ನಬಸಪ್ಪ ತುಬಾಕಿ ಅವರನ್ನು ಹೃದಯ ಪೂರ್ವಕವಾಗಿ ಸನ್ಮಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸವಿತಾ ಕೋಲಕಾರ, ಗ್ರಾ.ಪಂ ಅಧ್ಯಕ್ಷರು ಆದ ಆಲಿ ಸಾಬ್ ತಳಗಡೆ, ಉಪಾಧ್ಯಕ್ಷ ಮಂಜು ಸಾದುನವರ್, ಸದಸ್ಯರು ಆದ ಸಂಗಪ್ಪ ಪಿಶಿ, ರಾಜುನಡುವಿನ ಮನಿ, ಗ್ರಾಮದ ಹಿರಿಯರು ಆದ ಸಿದ್ದರಾಮಯ್ಯ ಹಿರೇಮಠ, ಮಾರುತಿ ಕಾದ್ರೋಳ್ಳಿ ಸೇರಿದಂತೆ ಪ್ರೌಢ ಶಾಲೆ ಶಿಕ್ಷಕರು ಬಂಕಾಪುರ, ಪಟ್ಟೆದ್ ಸೇರಿದಂತೆ ಸಹ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರ ಸಿಂಗರಗಾವಿ ಹಾಗೂ ಸರ್ವ ಸದಸ್ಯರು ಎಲ್ಲಾ ಪ್ರಾಥಮಿಕ ಶಾಲೆಗಳ ಕ್ರೀಡಾ ಪಟುಗಳು, ದೈಹಿಕ ಶಿಕ್ಷಕರು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಬಸವರಾಜ ಪಾಟೀಲ ಅವರು ಕ್ರೀಡಾಕೂಟವನ್ನು ಸಂಯೋಜಿಸಿದ ಎಲ್ಲರಿಗೂ ಗೌರವ ಸಲ್ಲಿಸಿ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿ “ದೈಹಿಕ ಶಿಕ್ಷಕರು ಉತ್ತಮ ಕ್ರೀಡಾಪಟುಗಳನ್ನು ತಯಾರಿಸಿ ತಾಲೂಕಿಗೆ ಹೆಸರನ್ನು ತರುವಂತೆ ಶ್ರಮಿಸಬೇಕು” ಎಂದು ಕರೆ ನೀಡಿದರು. ಹಿರಿಯ ಶಿಕ್ಷಕರು ಆದ ಸಿದ್ದಯ್ಯ ಹಿರೇಮಠ, ಕೆ.ಜಿ. ಗಡಾದ, ಕಲ್ಲಪ್ಪ ಇಟ್ನಾಳ, ಬಸವರಾಜ ಹುಲ್ಲೂರ, ವಿಠ್ಠಲ ನನ್ನೂರ ಹಾಗೂ ಎಲ್ಲ ಶಾಲೆಗಳ ದೈಹಿಕ ಶಿಕ್ಷಕರು ಹಾಗೂ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ಮಾತನಾಡಿದ ಮುಖ್ಯ ಗುರುಗಳು ಆದ ಕಲ್ಲಪ್ಪ ಇಟ್ನಾಳ್, ಸಿ.ಆರ್.ಪಿ ವಿನೋದ್ ಪಾಟೀಲ್, ಮಾರುತಿ ಜೋಳದರವರು ಈ ಕ್ರೀಡಾಕೂಟದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಲ್ಲರನ್ನು ಸಹ ಸನ್ಮಾನ ಮಾಡಲಾಯಿತು. ಬಿ.ಇ. ಓ ಚನ್ನಬಸಪ್ಪ ತುಬಾಕಿಯವರು ಗುಂಡು ಎಸೆತದ ಮೂಲಕ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಒಟ್ಟಾರೆ ಅದ್ದೂರಿಯಾಗಿ ವೀರಾಪುರ ಗ್ರಾಮದಲ್ಲಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ ಗೊಂಡಿತು.

ವರದಿ:ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!