ಗದಗ: ಕೃಷ್ಣ ಜಯಂತಿಯ ಅಧ್ಯಕ್ಷರು ಹಾಗೂ ಉದ್ಘಾಟಕರು ಆದ ಸಚಿವರು ಸನ್ಮಾನ್ಯ ಶ್ರೀ H K ಪಾಟೀಲ್, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಮಾಜಿ ಶಾಸಕರು ಸನ್ಮಾನ್ಯ D R ಪಾಟೀಲ್, ಜಿಲ್ಲಾಧಿಕಾರಿಗಳಾದ ಶ್ರೀ ಸಿ.ಎನ್ ಶ್ರೀಧರ್, ಜಿಲ್ಲಾ ಪಂಚಾಯತ ಸಿಇಓ ಶ್ರೀ ಭರತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರೋಹನ್ ಜಗದೀಶ್, ಹಿರಿಯ ಮುಖಂಡರು ರಾಮನಗೌಡ ಪಾಟೀಲ್ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರು B B ಅಸೋಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಅಕ್ಬರ್ ಸಾಬ್ ಬಬರ್ಚಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಬಸವರಾಜ ಬಳ್ಳಾರಿ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಅಧಿಕಾರಿಗಳು ಸಮುದಾಯದ ಮುಖಂಡರು ಉಪಸ್ಥಿತಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಬಂಧುಬಾಂಧವರು ಈ ಒಂದು ಇತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಸಾವಿತ್ರಮ್ಮ ಹಟ್ಟಿ ಅವರ ಭಾಮಿನಿ ಕೀರ್ತನೆ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ SSLC & PUC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯರಾದ ಡಾ.ರಮೇಶ ಕಲ್ಲನಗೌಡರ ಅವರು ಶ್ರೀ ಕೃಷ್ಣನ ಜೀವನ ಮತ್ತು ಸಂದೇಶದ ಕುರಿತು ಉಪನ್ಯಾಸ
ನೀಡಿದರು ಮುದ್ದು ಮಕ್ಕಳು ಕೃಷ್ಣ ರಾಧೆ ವೇಷದಲ್ಲಿ ಬಂದಿದ್ದರು, ಮಕ್ಕಳಿಂದ ನೃತ್ಯ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಅನಂತ ಧನ್ಯವಾದಗಳು ನಿಮ್ಮ ಪ್ರೀತಿಯ, ಹರೀಶ ಪೂಜಾರ.
ಅಧ್ಯಕ್ಷರು ಗದಗ ಜಿಲ್ಲಾ ಗೊಲ್ಲ (ಯಾದವ) ಸಂಘ, ಕಾರ್ಯಕಾರಿ ಸಮಿತಿ ಸದಸ್ಯರು ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘ, ಸದಸ್ಯರು ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಲೆಮಾರಿ ಅರೆಲೆಮಾರಿ ಸಲಹಾ ಸಮಿತಿ.
ವರದಿ: ರಾಜು ಮುಂಡೆ




