—————————————–ಯರಗೇರಾ ಗ್ರಾಮದಲ್ಲಿ ಬಡೆಸಬ್ ದಾದಾನ ದರ್ಶನ ಪಡೆದು
ರಾಯಚೂರು : ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಶಾಸಕರಾದ ಬಸನಗೌಡ ದದ್ದಲ್ ಅವರು ಆಗಸ್ಟ್ 10 ರಂದು ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಯರಗೇರಾ ಗ್ರಾಮಕ್ಕೆ ತೆರಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಪೂರ್ಣಗೊಂಡ ಭವನವನ್ನು ಲೋಕಾರ್ಪಣೆ ಮಾಡಿದರು.
ಯರಗೇರಾ ಗ್ರಾಮದ ಸಮುದಾಯ ಭವನವನ್ನು ಶಾಸಕರು ಉದ್ಘಾಟಿಸಿದರು.

ಇದೆ ವೇಳೆ ಗ್ರಾಮದ ಮೇಥೋಡಿಸ್ಟ್ ಚರ್ಚ್ ದೇವಾಲಯ ನಿರ್ಮಾಣಕ್ಕೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು.
ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ: ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡಲು ಶಾಸಕರಾದ ಬಸನಗೌಡ ದದ್ದಲ್ ಅವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಯರಗೇರಾ ಗ್ರಾಮಸ್ಥರು ಮತ್ತು ಮುಖಂಡರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ರೆಡ್ಡಿ ಬುರ್ದಿಪಾಡ್. ಮಲ್ಲಿಕಾರ್ಜುನ ಗೌಡ. ಬಸವರಾಜ್ ವಕೀಲರು. ನಾಗಪ್ಪ ವಕೀಲರು.
ನಾಗೇಂದ್ರಪ್ಪ. ಕೃಷ್ಣಜಿ.ಊರಿನ ಹಿರಿಯ ಮುಖಂಡರು, ಸುತ್ತಲಿನ ಗ್ರಾಮಗಳ ಮುಖಂಡರು, ಅಧಿಕಾರಿಗಳು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಾರಲ ದಿನ್ನಿ ವೀರನ ಗೌಡ




