Ad imageAd image

ನಾಗಪುರ ದೀಕ್ಷಾ ಭೂಮಿ ಯಾತ್ರೆಗೆ ತೆರಳುವ ವಾಹನಗಳಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ

Bharath Vaibhav
ನಾಗಪುರ ದೀಕ್ಷಾ ಭೂಮಿ ಯಾತ್ರೆಗೆ ತೆರಳುವ ವಾಹನಗಳಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ
WhatsApp Group Join Now
Telegram Group Join Now

ಅಥಣಿ: 2025-26ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದ ದೀಕ್ಷಾ ಭೂಮಿಯಲ್ಲಿ ಅ. 2 ರಂದು (ವಿಜಯದಶಮಿ ದಿನದಂದು) ನಡೆಯುವ ದಮ್ಮ ಪ್ರವರ್ತನ ದಿನ ಕಾರ್ಯಕ್ರಮಕ್ಕೆ ಅಥಣಿ ಹಾಗೂ ಕಾಗವಾಡ ತಾಲೂಕಿನ ಸೆ. 30ರಿಂದ ಅ. 4ರವರೆಗೆ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಾಗಪುರದ ದೀಕ್ಷಾಭೂಮಿ ಯಾತ್ರೆಗೆ ಮೊಟ್ಟ ಮೊದಲು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ನಾಗಪುರ ದೀಕ್ಷಾ ಭೂಮಿಗೆ ತೆರಳುವ ವಾಹನಗಳಿಗೆ ಶಾಸಕ ಲಕ್ಷ್ಮಣ ಸವದಿ ಅವರು ಚಾಲನೆ ನೀಡಿದರು.

ನಂತರ ಅಥಣಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪಿ.ಎಸ್ ಪತ್ತಾರ ಅವರು ಮಾತನಾಡಿ ೨ ಅಕ್ಟೋಬರ್ ೨೦೨೫ ರ ತಾರೀಖಿನಂದು ನಡೆಯಲಿರುವ ಪ್ರವರ್ತನಾ ದಿನಕ್ಕೆ (ವಿಜಯ ದಶಮಿ ದಿನದಂದು) ನಾಗಪುರ ದೀಕ್ಷಾ ಭೂಮಿಗೆ ಯಾತ್ರಾರ್ಥಿಗಳಿಗೆ ಸುರಕ್ಷಿತವಾಗಿ ಹೋಗಿ ಬರಲು ಅಥಣಿ ಯಿಂದ 5 ಐದು ಬಸ್ಸುಗಳ ನಾಗಪುರ ದಿಕ್ಷಾ ಭೂಮಿಗೆ ಬಿಡಲಾಗಿದೆ ಎಂದರು ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿ ಹೋಗಿ ಬನ್ನಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಿದ್ದಾರ್ಥ್ ಸಿಂಗೆ. ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಎಸ್.ಎ. ಮಾಂಗ. ಚಂದ್ರಕಾಂತ್ ಕಾಂಬಳೆ. ಜಿ. ಆರ್ ಪವಾರ. ಗೂಳಪ್ಪನವರ ಹಾಗೂ ಒ.ಆಯ್.ಅರಟಾಳ. ರಾಜಶೇಖರ ಹಿರೇಮನಿ. ಸಿ. ಬಡಕಂಬಿ. ಜೈಗುಣಿ ಸರ್. ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ: ರಾಜು ವಾಘಮಾರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!