ಮೊಳಕಾಲ್ಮುರು:ತಾಲೂಕಿನ ವಿವಿಧ ಕಡೆಯಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಗುರುವಾರ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿದರು.
ತಾಲೂಕಿನ ಮರ್ಲಹಳ್ಳಿ ಗ್ರಾಮದಲ್ಲಿ ಬೆಳಿಗ್ಗೆ 2.50 ಕೋಟಿ ವೆಚ್ಚದ ಮಲ್ಪೆ ಮೊಳಕಾಲ್ಮುರು ರಾಜ್ಯ ಹೆದ್ದಾರಿ ಅಭಿವೃದ್ಧಿ, ವಡೇರಹಳ್ಳಿ ಬಳಿಯಲ್ಲಿ 2.50 ಕೋಟಿ ವೆಚ್ಚದ ಹಂಪಿ ಕಮಲಾಪುರ ಹೆದ್ದಾರಿ ಅಭಿವೃದ್ಧಿ ಶಂಕು ಸ್ಥಾಪನೆ ನೆರವೇರಿಸಿದರು.
ತಾಲೂಕು ಆಡಳಿತ ಸೌಧದ ಆವರಣದಲ್ಲಿ ಮಧ್ಯಾಹ್ನ 1:30ಕ್ಕೆ ವಿಕಲ ಚೇತನರಿಗೆ ಯಂತ್ರ ಚಾಲಿತ ದ್ವಿ ಚಕ್ರವಾಹನ ವಿತರಿಸಿದರು.

ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ಬ್ಯಾಟರಿ ಚಾಲಿತ ವೀಲ್ ಚೇರ್,ಮೂವರಿಗೆ ಟಾಕಿಂಗ್ ಲ್ಯಾಪ್ ಟ್ಯಾಪ್,ಮೂರು ಹೊಲಿಗೆ ಯಂತ್ರ ಸೇರಿದಂತೆ ಹತ್ತು ಫಲಾನುಭವಿಗಳಿಗೆ ವಿವಿಧ ಸಲಕರಣೆ ವಿತರಿಸಿದರು.

ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 167 ಫಲಾನುಭವಿಗಳಿಗೆ ಪೂರ್ವ ಕಲಿಕೆಯ ಮಾನ್ಯತೆ ಕಿಟ್,ಕಂದಾಯ ಇಲಾಖೆಯ ಹದಿನೈದು ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ ಮಾಡಲಾಯಿತು.ಈ ವೇಳೆ ತಹಶೀಲ್ದಾರ್ ಜಗದೀಶ್, ಜಿಲ್ಲಾ ಅಂಗವಿಕಲ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಅಧಿಕಾರಿ ವೈಶಾಲಿ,ಕಾರ್ಮಿಕ ನಿರೀಕ್ಷಕಿ ಕುಸುಮ,ಸಿಬ್ಬಂದಿ ನಗೀನಾ,ಲೋಕೋಪಯೋಗಿ ಇಲಾಖೆಯ ಎಇಇ ಲಕ್ಷ್ಮಿ ನಾರಾಯಣ, ಪಟ್ಟಣ ಪಂಚಾಯಿತಿ ಸದಸ್ಯ ಖಾದರ್, ಪಿ ಗೋಪಾಲ್ ಮರ್ಲ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಣ್ಣ,ಸದಸ್ಯರಾದ ಬಂಗಿ ಸೂರಯ್ಯ,ಗಂಗರೆಡ್ಡಿ.ಗಂಗರಾಜ,ಮುಖಂಡರಾದ ತಿಪ್ಪೇಸ್ವಾಮಿ,ದಾನ ಸೂರನಾಯಕ,ರೇಷ್ಮೆ ವೀರೇಶ್,
ಎನ್. ನಾಗರಾಜ,ಪಿಡಿಓ ಮಲ್ಲಿಕ್ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ




