ಮೊಳಕಾಲ್ಮುರು:ಫೆಬ್ರವರಿ ಎರಡನೇ ವಾರದ ಒಳಗಾಗಿ ನಿರ್ಮಾಣದ ಕೊನೆ ಹಂತದಲ್ಲಿರುವ ವಾಲ್ಮೀಕಿ ಭವನದ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶಾಸಕ ಎನ್.ವೈ.ಗೋಪಾಲಕೃಷ್ಣ ಮಂಗಳವಾರ ಕೆಆರ್ಐಡಿಎಲ್ ಎಇಇ ನಟರಾಜ್‌ಗೆ ಖಡಕ್ ಸೂಚನೆ ನೀಡಿದರು.
ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಬೃಹತ್ತಾಗಿ ನಿರ್ಮಿಸಲು ಮುಂದಾಗಿರುವ ಈ ವಾಲ್ಮೀಕಿ ಕಟ್ಟಡ ನಿರ್ಮಾಣಕ್ಕೂ ಪೂರ್ವದಲ್ಲಿ ವ್ಯವಸ್ಥಿತವಾಗಿ ಕೆಲವು ರೂಪುರೇಷೆಗಳನ್ನು ಪಾಲಿಸಿದ್ದರೆ ಇಷ್ಟೊತ್ತಿಗೆ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಪಟ್ಟಣದಿಂದ ಹೊರಭಾಗದಲ್ಲಿ ಕಟ್ಟಡ ಇರುವುದರಿಂದ ಕಿಡಿಗೇಡಿಗಳು ಅವಾಂತರ ಮಾಡುವುದು ಸಾಮಾನ್ಯವಾಗಿದೆ. ಇನ್ನಾದರೂ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು.
ಈ ವಾಲ್ಮೀಕಿ ಭವನ ನಿರ್ಮಣಕ್ಕೆ ಮುಂಜೂರಾದ ಅನುದಾನದಲ್ಲಿ ಪ್ರಸ್ತುತವಾಗಿ ನಮ್ಮಲ್ಲಿ 25 ಲಕ್ಷ ರೂ ಹಣವಿದೆ. ಈ ಹಣದಲ್ಲಿ ನಾವು ಸ್ವಾಗತ ಕಮಾನ್, ಗೇಟ್, ಕಿಡಿಗೇಡಿಗಳಿಂದ ಹಾಳಾದ ವಸ್ತುಗಳ ಪುನರ್ ವ್ಯವಸ್ಥೆ, ಡೈನಿಂಗ್ ಹಾಲ್‌ನಲ್ಲಿ ಆಸನಗಳು ಹಾಗೂ ಕಟ್ಟಡಕ್ಕೆ ಸುಣ್ಣ, ಬಣ್ಣದಿಂದ ಅಲಂಕರಿಸಿ ಉದ್ಘಾಟನೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಕೆಆರ್‌ಐಡಿಎಲ್ ಎಇಇ ನಟರಾಜ್ ವಿವರಿಸಿದರು.
ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಭವನದ ಆವರಣದಲ್ಲಿ ಉತ್ತಮವಾದ ಮರಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸುತ್ತೇನೆ. ಶೀಘ್ರವೇ ಈ ಭವನವನ್ನು ಲೋಕಾರ್ಪಣೆ ಮಾಡುವುದಿಂದ ಮದುವೆ. ಶುಭಸಮಾರಂಭಗಳಿಗೆ ಹೆಚ್ಚು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.
ಸ್ಥಳದಲ್ಲಿ ಜಿಪಂ ಮಾಜಿ ಸದಸ್ಯರಾದ ಕೆ.ಜಗಲೂರಯ್ಯ, ಎ.ಮಾರನಾಯಕ, ಮುಖಂಡರಾದ ಬಡೋಬಯ್ಯ, ಪಾಪನಾಯಕ. ಹಾನಗಲ್ ತಿಪ್ಪೇಸ್ವಾಮಿ, ಬಿ.ಎಸ್.ಮುರುಳೀಧರ ನಾಯಕ, ಗುರುರಾಜಪ್ಪ, ಗೋವಿಂದಪ್ಪ, ಸತ್ಯನಾರಾಯಣ, ಅಡವಿ ಮಾರಯ್ಯ, ಮಣಿಕಂಠ, ವೀರೇಶ್, ಬಸವರಾಜ್, ವಿಜಯ್, ಕರಿಬಸಪ್ಪ, ಎಸ್.ಖಾದರ್, ಪರಮೇಶ್ವರಪ್ಪ, ಗೋಪಾಲ್, ಪೆನ್ನಯ್ಯ, ಪಿಎಸ್‌ಐ ಜಿ.ಪಾಂಡುರಂಗ, ಮಲ್ಲಿಕಾರ್ಜುನ್, ಜಯಣ್ಣ, ವಕೀಲ ಪಿ.ಜಿ.ವಸಂತಕುಮಾರ್ ಇದ್ದರು.