Ad imageAd image

ಶತ್ರು ರಾಷ್ಟ್ರದ ವಿರುದ್ಧ ಯುದ್ಧ ಮಾಡಲೇಬೇಕು: ಶಾಸಕ ಎನ್ ವೈ ಗೋಪಾಲಕೃಷ್ಣ

Bharath Vaibhav
ಶತ್ರು ರಾಷ್ಟ್ರದ ವಿರುದ್ಧ ಯುದ್ಧ ಮಾಡಲೇಬೇಕು: ಶಾಸಕ ಎನ್ ವೈ ಗೋಪಾಲಕೃಷ್ಣ
WhatsApp Group Join Now
Telegram Group Join Now

                                 ಭಯೋತ್ಪಾದಕರ ದಾಳಿಗೆ ಪ್ರತ್ಯುತ್ತರ ನೀಡುವ ಸಮಯ ಬಂದಿದೆ

ಮೊಳಕಾಲ್ಮುರು: ಪಹಾಲ್ಗಮ್ ದಾಳಿ ಖಂಡಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ ನೇತೃತ್ವದಲ್ಲಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಸಂಜೆ ಕಾಂಗ್ರೆಸ್ ಪಕ್ಷದಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಭಯೋತ್ಪಕರ ದಾಳಿಗೆ ಬಲಿಯಾದ ಪ್ರವಾಸಿಗ ಹುತಾತ್ಮರನ್ನು ಸ್ಮರಿಸಿ ಮೇಣದ ಬತ್ತಿ ಹಿಡಿದು ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ವೇಳೆ ಶಾಸಕ ಎನ್ ವೈ ಗೋಪಾಲಕೃಷ್ಣ ಮಾತನಾಡಿ, ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ದಾಳಿ ಅತ್ಯಂತ ಖಂಡನೀಯ.ಉಗ್ರರ ಈ ದಾಳಿಗೆ ನಾವು ಪ್ರತ್ಯುತ್ತರ ನೀಡಲೇಬೇಕಾದ ಸಮಯ ಒದಗಿ ಬಂದಿದೆ,ನಾವೇನು ಅಶಕ್ತರಲ್ಲ ನಾವು ಶಕ್ತಿವಂತರು.ಉಗ್ರರು ಆಯುಧಗಳಿಂದ ದಾಳಿ ನಡೆಸಿದ್ದು ಈ ಆಯುಧಗಳಿಂದಲೇ ನಾವು ಪ್ರತಿಕಾರ ತೀರಿಕೊಳ್ಳುವ ಸಮಯ ಬಂದಿದೆ. ಶತ್ರು ರಾಷ್ಟ್ರದ ವಿರುದ್ಧ ಯುದ್ಧ ಮಾಡಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಒತ್ತಾಯ ಮಾಡುತ್ತಿದ್ದೇವೆ.

ಭಾರತ ದೇಶ ಅತ್ಯಂತ ಶಾಂತಿಯುತ ದೇಶ,ನಮಗೆ ಎಂದಿಗೂ ಕೂಡ ಅಕ್ರಮಣಕಾರಿ ನೀತಿ ಬೇರೆ ದೇಶದಲ್ಲಿ ಶಾಂತಿ ಕದಡುವ ಕೆಲಸ ನಾವು ಮಾಡುವುದಿಲ್ಲ.ನಮ್ಮದು ಶಾಂತಿ ಮತ್ತು ಸಹಬಾಳ್ವೆಗೆ ಹೆಸರಾದ ದೇಶ. ದೇಶದ ಗಡಿ ಭಾಗಗಳಿಂದ ಕಳ್ಳತನದ ಮಾರ್ಗಗಳಿಂದ ನುಸುಳಿ ಬರುವ ಉಗ್ರಗಾಮಿಗಳು ಭಾರತದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಲೇ ಇದ್ದಾರೆ, ಇಂತಹ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಉಗ್ರಗಾಮಿಗಳನ್ನು ಹತ್ತಿಕ್ಕುವ ಕೆಲಸವಾಗಬೇಕು ಇಂತಹ ಸಂಕಷ್ಟದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.

ಯುದ್ಧ ಮಾಡೋಕೆ ಬಂದರೆ ಎಂತಹ ಶತ್ರು ದೇಶವೆನ್ನೆ ಸದೆಬಡಿಯುವ ಶಕ್ತಿ ಹೊಂದಿದ್ದೇವೆ ಯಾವ ಕಾರಣಕ್ಕೂ ಸೋಲುವ ಪ್ರಮೇಯ ಬರುವುದಿಲ್ಲ ಹಾಗಾಗಿ ಯುದ್ಧವೊಂದೇ ಶತ್ರು ದೇಶವನ್ನು ಸದೆಬಡಿಯಲು ಇರುವ ಮಾರ್ಗ ಎಂದರು.

WhatsApp Group Join Now
Telegram Group Join Now
Share This Article
error: Content is protected !!