ಖಾನಾಪುರ: ಹೌದು ಬೆಳಗಾವಿ ಜಿಲ್ಲೆಯಲ್ಲಿ Dcc ಬ್ಯಾಂಕ್ ಚುನಾವಣೆ ತುಂಬಾನೇ ರಂಗೇರಿದ್ದು, ಬರುವ ಆಕ್ಟೊಬರ್ 19 ರಂದು ಚುನಾವಣೆ ನಡೆಯಲಿದೆ.

ಖಾನಾಪುರ ಕ್ಷೇತ್ರದಲ್ಲೂ ಸಹ Dcc ಬ್ಯಾಂಕ್ ಚುನಾವಣೆ ಕಾವು ತುಂಬಾನೇ ಜೋರಾಗಿದೆ. ಒಂದು ಕಡೆ ವಿಧಾನ ಪರಿಷತ್ ಸದಸ್ಯ ಚನ್ನರಾಜು ಹಟ್ಟಿ ಹೊಳಿ ಚುನಾವಣಾ ಕಣದಿಂದ ಹಿಂದೆ ಸರಿದಿರುವುದು ಹಾಗೂ ಹಾಲಿ ಶಾಸಕ ವಿಠಲ ಹಲಗೇಕರ್ ನಾನು dcc ಬ್ಯಾಂಕ್ ಚುನಾವಣೆ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದರಿಂದ ಮಾಜಿ ಶಾಸಕ ಅರವಿಂದ ಪಾಟೀಲರ ಗೆಲುವಿಗೆ ಅಡ್ಡಗಾಲು ಎಂದೇ ವಿಶ್ಲೇಷಣೆ ವ್ಯಕ್ತವಾಗುತ್ತಿದೆ.

ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜುರವರು ಖಾನಾಪುರ ಕ್ಷೇತ್ರದ ಹಾಲಿ ಶಾಸಕ ವಿಠಲ ಹಲಗೇಕರ್ ಅವರೊಂದಿಗೆ ಮುಕ್ತವಾಗಿ ಸಂದರ್ಶನ ಮಾಡಿ dcc ಬ್ಯಾಂಕ್ ಚುನಾವಣೆ, ಕ್ಷೇತ್ರದ ಅಭಿವೃದ್ಧಿ ಕೆಲಸ ಗಳು ಹೀಗೆ ವಿವಿಧ ವಿಷಯಗಳ ಬಗ್ಗೆ ಮುಕ್ತವಾಗಿ ಸಂವಾದ ಮಾಡಿದ್ದಾರೆ.
ವರದಿ: ಬಸವರಾಜು




