ಲಿಂಗಸ್ಗೂರು: ಲಿಂಗಸ್ಗೂರು ತಾಲೂಕಿನಲ್ಲಿ ಹೆಚ್ಚಾಗಿದ ಡಕೋಟಾ ಸರ್ಕಾರಿ ಬಸ್ಸುಗಳು ಇರೋದ್ರಿಂದ ದಿನನಿತ್ಯ ವಿದ್ಯಾರ್ಥಿಗಳಿಗೂ ಮತ್ತು ಪ್ರಯಾಣಿಕರಿಗೂ ನರಕ ಯಾತನೆ ಅನುಭವಿಸುವ ಸ್ಥಿತಿ ಉಂಟಾಗಿದೆ, ಲಿಂಗಸುಗೂರು ಹಟ್ಟಿಗೆ ಹೊರಟಂತ ಬಸ್ಸು ರಸ್ತೆ ಮಧ್ಯದಲ್ಲಿ ಕೆಟ್ಟನಿಂತು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯ ಮೇಲೆ ಕಾಯುತ್ತಿರುವ ದೃಶ್ಯ ಕಂಡು ಬಂತು, ಚಾಲಕರಿಗೆ ವಿಚಾರಿಸಿದಾಗ ಬಸ್ಸಿನಲ್ಲಿ ಪವರ್ ಸಪ್ಲೈ ಆಗದ ಕಾರಣ ಬಸ್ ಚಾಲುವಾಗುತ್ತಿಲ್ಲ ಈಗಾಗಲೇ ಸಂಬಂಧಪಟ್ಟ ಡಿಪೋ ಮ್ಯಾನೇಜರ್ ಗೆ ತಿಳಿಸಲಾಗಿದೆ, ಅವರು ಡಿಪೋದಲ್ಲಿ ಯಾವುದೇ ರೀತಿಯ ಬಸ್ ಇಲ್ಲದ ಕಾರಣ ಬೇರೆ ಬಸ್ಸಿನ ವ್ಯವಸ್ಥೆ ಮಾಡಲು ತಡವಾಗುತ್ತಿದೆ ಎಂದು ಹೇಳಿದರು ಎನ್ನಲಾಗುತ್ತಿದೆ.

ದಿನನಿತ್ಯ ಲಿಂಗಸ್ಗೂರು ತಾಲೂಕಿನಲ್ಲಿ ಇಂಥ ಡಕೋಟಾ ಸರಕಾರಿ ಬಸ್ಸುಗಳು ಇರುವುದರಿಂದ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೂ ಮತ್ತು ಪ್ರಯಾಣಿಕರಿಗೂ ಊರು ತಲುಪುತ್ತೇವೆ ಎಂಬುವ ಭರವಸೆ ಇಲ್ಲದಂತಾಗಿದೆ, ಯಾವ ಸಮಯದಲ್ಲಾದರೂ ಅಥವಾ ಯಾವ ಕ್ಷಣದಲ್ಲಾದರೂ ಬಸ್ ಕೆಟ್ಟು ನಿಲ್ಲುವ ಪರಿಸ್ಥಿತಿ ಉಂಟಾದರೂ ಇಲ್ಲಿಯ ಶಾಸಕರಿಗಾಗಲಿ ಅಥವಾ ಡಿಪೋ ಮ್ಯಾನೇಜರ್ ಗೆ ಆಗಲಿ ಸಾರಿಗೆ ಸಚಿವರ ಗಮನಕ್ಕೆ ತಂದು ಬೇರೆ ಬಸ್ ವ್ಯವಸ್ಥೆ ಕಲ್ಪಿಸಲು ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ.
ವರದಿ : ಶ್ರೀನಿವಾಸ ಮಧುಶ್ರೀ




