Ad imageAd image

ನಾನು ಜೈಲಿಂದ ಹೊರ ಬಂದ ದಿನವೇ ಸರ್ಕಾರ ಪತನವಾಗಲಿದೆ : ವಕೀಲ ದೇವರಾಜೇಗೌಡ

Bharath Vaibhav
ನಾನು ಜೈಲಿಂದ ಹೊರ ಬಂದ ದಿನವೇ ಸರ್ಕಾರ ಪತನವಾಗಲಿದೆ : ವಕೀಲ ದೇವರಾಜೇಗೌಡ
DEVRAJJE GOWDA
WhatsApp Group Join Now
Telegram Group Join Now

ಹಾಸನ: ನಾನು ಜೈಲಿಂದ ಹೊರ ಬಂದ ದಿನವೇ ಸರ್ಕಾರ ಪತನವಾಗಲಿದೆ ಎಂದು ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ.

ಎಸ್‌ಐಟಿ ವಶದಲ್ಲಿರುವ ದೇವರಾಜೇಗೌಡ ಪೊಲೀಸ್ ವಾಹನದಲ್ಲಿ ಮಾತನಾಡುತ್ತಾ, ಸಂಸದ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೈವಾಡವಿದೆ.

ಮೋದಿ, ಬಿಜೆಪಿ ಮತ್ತು ಹೆಚ್.ಡಿ. ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ನನಗೆ ನೂರು ಕೋಟಿ ರೂಪಾಯಿ ಆಫರ್ ನೀಡಿದ್ದರು ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಅವರ ಮಾತಿಗೆ ಒಪ್ಪದಿದ್ದಾಗ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲು ಅನೇಕ ಕೇಸುಗಳನ್ನು ಹಾಕಿದ್ದಾರೆ. ಆದರೆ, ಅವುಗಳಲ್ಲಿ ಸಾಕ್ಷ್ಯ ಸಿಗಲಿಲ್ಲ.

ನನ್ನನ್ನು ಮಟ್ಟ ಹಾಕಲು ಪೆನ್ ಡ್ರೈವ್ ಪ್ರಕರಣದಲ್ಲಿ ಬಂಧನ ಮಾಡಿಸಿದ್ದಾರೆ. ಇದರ ಹಿಂದೆ ಡಿ.ಕೆ. ಶಿವಕುಮಾರ್ ಕೈವಾಡವಿದೆ. ನಾನು ಕಾನೂನು ಹೋರಾಟ ಮಾಡಿ ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ.

ನನ್ನ ಬಳಿ ಇರುವ ಪೆನ್ ಡ್ರೈವ್ ನಲ್ಲಿ ಕಾರ್ತಿಕ್ ಪತ್ನಿ ಅಪಹರಣ ಪ್ರಕರಣದ ವಿಡಿಯೋ ಇದೆ. ಡಿ.ಕೆ. ಶಿವಕುಮಾರ್ ನನ್ನೊಂದಿಗೆ ಮಾತನಾಡಿರುವ ಆಡಿಯೋ ಇದೆ.

ನಾನು ಜೈಲಿನಿಂದ ಹೊರಬಂದ ದಿನವೇ ಸರ್ಕಾರ ಪತನವಾಗಲಿದೆ. ಪೆನ್ ಡ್ರೈವ್ ನಲ್ಲಿರುವ ವಿಡಿಯೋ ಮತ್ತು ಆಡಿಯೋಗಳನ್ನು ಬಿಡುಗಡೆ ಮಾಡುತ್ತೇನೆ. ನಾನು ನನ್ನ ಬಳಿ ಇರುವ ಸಾಕ್ಷ್ಯಯನ್ನು ಸೇಫಾಗಿ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!