Ad imageAd image

ಮಹಿಳೆ ಮೇಲೆ ದೌರ್ಜನ್ಯ ಕೇಸ್ : ವಕೀಲ ದೇವರಾಜೇಗೌಡ ಅರೆಸ್ಟ್ 

Bharath Vaibhav
ಮಹಿಳೆ ಮೇಲೆ ದೌರ್ಜನ್ಯ ಕೇಸ್ : ವಕೀಲ ದೇವರಾಜೇಗೌಡ ಅರೆಸ್ಟ್ 
DEVRAJJE GOWDA
WhatsApp Group Join Now
Telegram Group Join Now

ಚಿತ್ರದುರ್ಗ : ಹೊಳೆನರಸೀಪುರ ಠಾಣೆಯಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ದೂರು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೆಗೌಡನನ್ನು ಚಿತ್ರದುರ್ಗದ ಹಿರಿಯೂರಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಮೇ 1 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ವಕೀಲ ದೇವರಾಜೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಕುರಿತು ದೂರು ದಾಖಲಿಸಿದ್ದಳು.

ದಾಖಲಾಗಿರುವ ದೂರಿನ ಆಧಾರದ ಮೇಲೆ ಇದೀಗ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಪೊಲೀಸರು ದೇವರಾಜೇಗೌಡನನ್ನು ವಶಪಡಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಅಜ್ಞಾತ ಸ್ಥಳದಲ್ಲಿ ಇದ್ದು ಮೂರು ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದ ದೇವರಾಜೇಗೌಡ, ಸಂತ್ರಸ್ತ ಮಹಿಳೆ ತನ್ನ ಗಂಡನ ಜೊತೆ ಮಾತನಾಡಿರುವ ಒಂದು ಆಡಿಯೋ ಹಾಗೂ ಶಿವರಾಮೇಗೌಡ ಡಿಕೆ ಶಿವಕುಮಾರ್ ಅವರಷ್ಟೇ ಮಾತನಾಡಿರುವ ಇನ್ನೊಂದು ಆಡಿಯೋ ಸೇರಿದಂತೆ ಪಟು ಮೂರು ಆಡಿಯೋಗಳನ್ನು ಬಿಡುಗಡೆ ಮಾಡಿದ್ದರು.

ಇದೀಗ ಚಿತ್ರದುರ್ಗದ ಹಿರಿಯೂರಿನಲ್ಲಿ ದೇವರಾಜ ಗೌಡನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಹಿರಿಯೂರು ಠಾಣೆಯ ಪೊಲೀಸರ ವಶದಲ್ಲಿ ದೇವರಾಜೇಗೌಡ ಇದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!