ಯಳಂದೂರು: ಚಾಮರಾಜನಗರ ಜಿಲ್ಲೆಯ ಯಳಂದೂರು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ 50ಲಕ್ಷ ರೂ ಅಂದಾಜು ವೆಚ್ಚದ ಪ್ರಯೋಗಾಲಯದ ಕಟ್ಟಡ ನಿರ್ಮಾಣದ ಭೂಮಿ ಪೂಜೆಯನ್ನು ಕೊಳ್ಳೇಗಾಲದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ರವರು ನೆರೆವೇರಿಸಿದರು.

ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ಚಿದಂಬರ್ ಮಾತನಾಡಿ ಕೊರೋನ ಬಂದ ಸಮಯದಲ್ಲಿ ಪ್ರಯೋಗಲಾಯಗಳು ಹೆಚ್ಚು ಅವಶ್ಯಕತೆ ಇದ್ದು ಮನಗೊಂಡ ಸರ್ಕಾರ ತಾಲೋಕು ಕೇಂದ್ರದಲ್ಲಿ ಎಲ್ಲತರದ ಟೇಸ್ಟ್ ಗೆ ಅನುಕೂಲ ಆಗಬೇಕು ಎಂದು ತೀರ್ಮಾನಿಸಿ ಇಂದು ಈ ತಾಲೂಕಿನಲ್ಲಿ ಭೂಮಿ ಪೂಜೆಯನ್ನು ಶಾಸಕರು ನೆರೆವೇರಿಸಿದರೆದು ತಿಳಿಸಿದರು.
ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರು ಮಾತನಾಡಿ ಯಳಂದೂರು ಆಸ್ಪತ್ರೆಗೆ ಪ್ರಯೋಗಲವು ಮುಖ್ಯವಾಗಿ ಬೇಕಿತ್ತು ಇದು 33ಹಳ್ಳಿಗಳಿಂದ ಕೂಡಿದ್ದು ಈ ಜನರಿಗೆ ಹಲವಾರು ಟೇಸ್ಟಗಳಿಗೆ ಬೇರೆ ಬೇರೆ ಲ್ಯಾಬ್ ಗಳಿಗೆ ಹೋಗಬೇಕಿತ್ತು ದುಡ್ಡು ಇನ್ನು ಮುಂದೆ ತಾಲೂಕಿನ ಆಸ್ಪತ್ರೆಯಲ್ಲೇ ಈ ಸಿಕುತ್ತದೆ ನೂರು ಬೆಡ್ ಆಸ್ಪತ್ರೆ ರೆಡಿ ಆಗ್ತಿರೋದ್ರಿಂದ ಜನರಿಗೆ ಪ್ರಯೋಗಳಯ ಉಪಯೋಗ ಆಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ HV ಚಂದ್ರು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಯೋಗೇಶ್, ತಾಲೋಕು ಅರೋಗ್ಯ ಅಧಿಕಾರಿಗಳದ ಡಾ. ಶ್ರೀಧರ್, ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿಗಳದ ಮಹೇಶ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಿಮಲ್ಲು ಅರೋಗ್ಯ ಸಮಿತಿಯ ಸದ್ಯಸರುಗಳು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




