ಕಾಗವಾಡ:ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ರೈತರು ನಡೆಸುತ್ತಿಉವ ಪ್ರತಿಭಟನೆಗೆ ನಾವು ಬೆಂಬಲವಾಗಿದ್ದೇವೆ ಎಂದು ನ್ಯಾಯವಾದಿ ರಾಹುಲ ಕಟಗೇರಿ ಹೇಳಿದರು.
ಮಂಗಸೂಳಿ ಗ್ರಾಮದಲ್ಲಿ ಬುಧವಾರ ಸಾಂಕೇತಿಕವಾಗಿ ಒಂದು ದಿನ ಮಟ್ಟಿಗೆ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ರೈತರಿಗೆ ಪ್ರತಿ ಟನ್ ಕಬ್ಬಿಗೆ 3500 ರೂ ಸಿಗುವವರೆಗುನಾವು ಹೋರಾಟ ನಡೆಸುತ್ತೇವೆ. ಪ್ರತಿಯೊಬ್ಬರಿಗೆ ರೈತರು ಆಸರೆ ಆಗುತ್ತಾರೆ ಮತ್ಯಾರು ಆಗುವುದಿಲ್ಲಾ ಎಂದರು.
ಇನ್ನು ಗ್ರಾಮ ಪಂಚಾಯತ ಸದಸ್ಯರಾದ ಪ್ರಮೋದ ಪೂಜಾರಿ ಮಾತನಾಡಿ ಸರ್ಕಾರ. ರೈತರ ಕಬ್ಬಿನ ಬೆಲೆಗೆ ಸೂಕ್ತ ಪರಿಹಾರ ನೀಡುವರಗೆ ನಮ್ಮ ಹೋರಾಟ ನಿಲ್ಲುವುದಿಲ್ಲಾ. ನಾವು ಯಾವದಕ್ಕೂ ಹೆದರುವುದಿಲ್ಲಾ ಎಂದು ಹೇಳಿದರು. ಈ ಸಮಯದಲ್ಲಿ ಜನಸೇವಕ ವಿನಾಯಕ ಕಾಂಬಳೆ ಸೇರಿದಂತೆ ಅನೇಕ ರೈತರು ಭಾಗಿಯಾಗಿದ್ದರು.
ವರದಿ: ಚಂದ್ರಕಾಂತ ಕಾಂಬಳೆ




