ಬೆಂಗಳೂರು:-ಪೀಣ್ಯ ದಾಸರಹಳ್ಳಿ ಕ್ಷೇತ್ರದ ಬಾಗಲಗುಂಟೆ ವಾರ್ಡಿನ ಎಂಇಐ ಬಡಾವಣೆ ಸೇರಿದಂತೆ ವಿವಿಧ ಕಡೆ ವ್ಯಾಪಾರಿಗಳು ಪಾದಚಾರಿ ರಸ್ತೆ ಮೇಲೆ ವ್ಯಾಪಾರ ಮಾಡುತ್ತಿದ್ದು ಸಾರ್ವಜನಿಕರಿಗೆ, ವಯಸ್ಸಾದವರಿಗೆ ನಡೆದಾಡಲು ಕಷ್ಟಕರವಾಗಿದೆ ಪಾದಚಾರಿ ರಸ್ತೆ ವ್ಯಾಪಾರಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಇದರಿಂದ ಎಂಇಐ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಗೌಡ್ರು ನೇತೃತ್ವದಲ್ಲಿ ಪಾದಚಾರಿ ರಸ್ತೆ ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿದರು.
ಎಂಇಐ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಸ್ವಯಂ ಪ್ರೇರಿತ ತೆರವುಗೊಳಿಸಲು ಮಾಲೀಕರಿಗೆ ಮತ್ತು ವ್ಯಾಪಾರಸ್ಥರಿಗೆ ಮನವಿ ಮಾಡಿದರು ಆದರೆ ಎಂಇಐ ಬಡಾವಣೆಯ ಮುಖ್ಯ ರಸ್ತೆಯಲ್ಲಿರುವ ನೂತನ ಬಿರಿಯಾನಿ ಅಂಗಡಿ ಪ್ರಾರಂಭವಾಗಿದ್ದು ಪುಟ್ ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದು ಈ ಬಿರಿಯಾನಿ ಅಂಗಡಿಯಿಂದ ಬೀದಿ ನಾಯಿಗಳ ಕಾಟ ಜಾಸ್ತಿ ಆಗಿವೆ ಶಾಲಾ ಮಕ್ಕಳಿಗೆ ಸಾರ್ವಜನಿಕರಿಗೆ ನಾಯಿಯಿಂದ ಭಯಭೀತರಾಗಿದ್ದಾರೆ ಅದಲ್ಲದೇ ವಯಸ್ಸಾದವರು ಪುಟ್ ಪಾತ್ ರಸ್ತೆಯಿಂದ ವಂಚಿತರಾಗಿದ್ದಾರೆ .
ಇದನ್ನೆಲ್ಲ ಎಂಇಐ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಗಮನಿಸಿ ಬಿರಿಯಾನಿ ಅಂಗಡಿ ಮಾಲೀಕನಿಗೆ ಪುಟ್ ಪಾತ್ ಮೇಲೆ ಇಡಬಾರದು ಎಂದು ಹೇಳಿದಕ್ಕೆ ಅವನು ದುರಹಂಕಾರಿ ವರ್ತನೆ ಮಾತಾಡಿದರು ಇಂತಹ ವ್ಯಾಪಾರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಶೀಘ್ರದಲ್ಲಿ ಒತ್ತುವರಿದಾರರಿಗೆ ನೋಟಿಸ್ ನೀಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಎಂಇಐ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷ್ಮಣ್ ಗೌಡ್ರು ಮನವಿ ಮಾಡಿಕೊಂಡಿದ್ದಾರೆ.
ವರದಿ:-ಅಯ್ಯಣ್ಣ ಮಾಸ್ಟರ್