ಮೊಳಕಾಲ್ಮುರು :ಜೆ ಜೆ ಎಂ ಕಾಮಗಾರಿಗಳಿಗೆ ಸರ್ಕಾರವು ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ, ಆದರೆ ಗುತ್ತಿಗೆದಾರರು ಸಮರ್ಪಕವಾಗಿ ಜೆ ಜೆ ಎಂ ಕಾಮಗಾರಿ ಕೆಲಸಗಳು ಮಾಡಿಲ್ಲ, ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿ ಎಂದು ಸಂಬಂಧ ಪಟ್ಟ ಆಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ 25 _26ನೇ ಸಾಲಿನ ಪ್ರಥಮ ಸಾಮಾನ್ಯ ಸಭೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿಯಾಗಿರುವ ಲಕ್ಷ್ಮಣ್ ತಳವಾರ್ ಅವರು ಎಲ್ಲಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಇ ಓ ಹನುಮಂತಪ್ಪ ಕ್ಷೇತ್ರದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿರುವ ಅಂಗನವಾಡಿ ಕಟ್ಟಡಗಳಲ್ಲಿ ಅಡಿಗೆ ಕೋಣೆ ಸಮಸ್ಯೆಗಳು ಇವೆ. ಎಸ್ ಡಿ ಎಂ ಸಿ ಅಧ್ಯಕ್ಷರು ಕೆಲವು ಕಡೆ ಯಾರಿಗೂ ಮಾಹಿತಿ ನೀಡದೇ ಸರ್ಕಾರದ ಕೆಲ ಅಂಗನವಾಡಿ ಕಟ್ಟಡಗಳನ್ನು ಹೊಡೆದಿರುವ ಮಾಹಿತಿ ಇದೆ ಎಂದು ಸಿ ಡಿ ಪಿ ಓ ವಿನಯ್ ಕುಮಾರ್ ಪ್ರಶ್ನೆ ಮಾಡಿ ತರಾಟೆ ತೆಗೆದುಕೊಂಡರು. ಅದೇ ರೀತಿ
ಮಕ್ಕಳಿಗೆ ಹಾಸ್ಟೆಲ್ ನಲ್ಲಿ ಊಟ ಬಿಸಿ ನೀರು ಹಾಗೂ ಮೂಲ ಸೌಕರ್ಯ ನೀಡಿ ಮಕ್ಕಳಿಗೆ ಸಹಕಾರ ನೀಡಿ ಮತ್ತು ಮಳೆಗಾಲ ಇರುವುದರಿಂದ ಸಾಂಕ್ರಾಮಿಕ ರೋಗಗಳಾದ ಡೆಂಗು ಮಲೇರಿಯಾ ಕಾಲರಾ ಇನ್ನಿತರ ಖಾಯಿಲೆಗಳು ಬರದ ಹಾಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ಔಷದಿಯನ್ನು ಹೊರಗಡೆ ಶಿಫಾರಸ್ಸು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ ಜಾಗೃತಿವಹಿಸಿ ವೈದ್ಯರು ಕೆಲಸ ಮಾಡಿ. ಕೋವಿಡ್ ರೋಗಿಗಳು ಬಂದಲ್ಲಿ ಎಚ್ಚರಿಕೆವಹಿಸಿ ಕೆಲಸ ಮಾಡಬೇಕು ಅದೇ ರೀತಿ ನಕಲಿ ವೈದ್ಯರ ವಿಚಾರವಾಗಿ ಡಿಎಚ್ಒ ರವರಿಗೆ ಮಾಹಿತಿ ನೀಡಿ ನಕಲಿ ವೈದ್ಯರ ವಿರುದ್ಧ ಎಫ್ಐಆರ್ ದಾಖಲು ಮಾಡಿ, ತಾಲೂಕಿನಾದ್ಯಂತ ನಕಲಿ ವೈದ್ಯರನ್ನು ಬಂದನ ಮಾಡಬೇಕು ಇದಕ್ಕೆ ಪೊಲೀಸರ ಸಹಾಯ ತೆಗೆದುಕೊಳ್ಳಬೇಕು ಎಂದು ಡಾ ಮಧುಕುಮಾರ್ ರವರಿಗೆ ಸಲಹೆ ನೀಡಿದರು.
ಈ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಗಳ ಬಗ್ಗೆ ಮತ್ತು ನೇರ ಸಾಲದ ಬಗ್ಗೆ ಮಾಹಿತಿ ತೆಗೆದುಕೊಂಡರು ಅದೇ ರೀತಿ ಮಳೆಗಾಲ ಇರುವುದರಿಂದ ಅಗತ್ಯವಿಳ್ಳ ಕಡೆ ಮರಗಳನ್ನು ನಾಟಿ ಮಾಡಬೇಕು ಎಂದು ಅರಣ್ಯ ಅಧಿಕಾರಿಗಳಿಗೆ ತಿಳಿಸಿದರು. ಇದೊಂದು ಪ್ರಮುಖ ವಿಚಾರವಾಗಿ ಮಳೆಗಾಲ ಇರುವುದರಿಂದ ಕೃಷಿ ಇಲಾಖೆಯವರು ರೈತರಿಗೆ ಸಕಾಲಕ್ಕೆ ಶೇಂಗಾ ಬೀಜ ಮತ್ತು ಗೊಬ್ಬರ ಅಗತ್ಯತೆಯುಳ್ಳ ಎಲ್ಲಾ ಸಾಮಗ್ರಿಗಳನ್ನು ಕ್ರೂಢೀಕರಿಸಿಟ್ಟುಕೊಳ್ಳಬೇಕು ಎಂದರು.

ಒಟ್ಟಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ ಉತ್ತಮ ಕೆಲಸ ಮಾಡಬೇಕು ಶೈಕ್ಷಣಿಕವಾಗಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಬೇಕು ಎಂದರು.
ಸಾಮಾನ್ಯ ಸಭೆ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಸೀರ್, ಜಿಲ್ಲಾ ಪಂಚಾಯತಿ ಅಧಿಕಾರಿ ಲಿಂಗರಾಜ್, ತಾಲ್ಲೂಕ ಆಡಳಿತ ಆಧಿಕಾರಿ ಡಾ ಮಧುಕುಮಾರ್, ಕೃಷಿ ಇಲಾಖೆ ಪ್ರಕಾಶ್ ಟಿ, ಪಶು ಇಲಾಖೆ ಡಾ ರಂಗಪ್ಪ, ಶಿಕ್ಷಣ ಇಲಾಖೆ ನಿರ್ಮಲಾ ದೇವಿ, ತೋಟಗಾರಿಕೆ ಇಲಾಖೆ ಸುಧಾಕರ್ ಅಕ್ಷರ ದಾಸೋಹ ಇಲಾಖೆ ಪಾತ ಲಿಂಗಪ್ಪ , ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ: ಪಿಎಂ ಗಂಗಾಧರ




