ಧಾರವಾಡ : ಕಲಘಟಗಿ ತಾಲೂಕಿನ ಸರಕಾರಿ ಪ್ರೌಢ ಶಾಲೆ, ಹಿರೆಹೊನ್ನಿಹಳ್ಳಿಯಲ್ಲಿ ಇಂದು ದಿನಾಂಕ 25-8-2025 ರಂದು ಉತ್ತರ ಕರ್ನಾಟಕ ನಿವೃತ್ತ ಅರಣ್ಯಾಧಿಕಾರಿ ಸಂಘದ ವತಿಯಿಂದ S S L C ವಿದ್ಯಾರ್ಥಿಗಳಿಗೆ ಪಾಠ ಆಧಾರಿತ ಪ್ರಶ್ನೆ ಕೋಠಿಯನ್ನು ಉಚಿತವಾಗಿ ನೀಡಲಾಯಿತು.ಈ ಸಭೆಯಲ್ಲಿ ಉತ್ತರ ಕರ್ನಾಟಕ ನಿವೃತ್ತ ಅರಣ್ಯಾಧಿಕಾರಿ ಸಂಘದ ಶ್ರೀ ಎಸ್. ಏನ್. ಕುಲಕರ್ಣಿ ನಿವೃತ್ತ D F O ರವರು ಮಾತನಾಡಿ ಓದಿದ್ದನ್ನು ಬರೆದು ತೆಗೆದರೆ ಉತ್ತಮ ಫಲಿತಾಂಶವನ್ನು ನಿರಿಕ್ಷಿಸಬಹುದು ಎನ್ನುವ ಕಿವಿಮಾತನ್ನು ಹೇಳಿದರು.
ನಂತರ ಶ್ರೀ ಎಸ್.ಬಾಳಕ್ರಷ್ಣ ನಿವೃತ್ತ I F S ಅಧಿಕಾರಿಗಳು ಪ್ರತಿ ವರ್ಷ ತಮ್ಮ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ತಾವೂಗಳು ನಡೆಸುವ ವಿವಿಧ ಕಾರ್ಯಗಳನ್ನು ವಿವರಿಸಿದರು.ಶ್ರೀ ಅಶೋಕ ಅಲಗೂರ ಇನ್ನೂರ್ವ A S F ಅವರು ತಾವು ಕಲಘಟಗಿ ತಾಲೂಕಿನಲ್ಲಿಯ ತಮ್ಮ ಸೇವೆಯನ್ನು ನೆನೆದು ತಾವುಗಳು ತಮ್ಮ ತಾಲೂಕಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಈ ಪುಸ್ತಕಗಳನ್ನು ವಿತರಿಸುತ್ತಿರುವದಾಗಿ ತಿಳಿಸಿದರು.ಈ ಸಂಘದ ಕಾರ್ಯದರ್ಶಿಗಳಾದ ಶ್ರೀ C K ಗರವಾಡ A S F ರವರು ತಮ್ಮ ಸಂಘದ ಕಾರ್ಯವೈಕರಿಯ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗಾಯತ್ರಿದೇವಿ ಸಜ್ಜನ ಮೇಡಂ ರವರು ಈ ಪಾಠ ಆಧಾರಿತ ಪ್ರಶ್ನೆ ಕೋಠಿಯ ಸದ್ಬಲಕೆ ಮಾಡಿಕೊಂಡು ತಾಲೂಕಿನ ಫಲಿತಾಂಶವನ್ನು ಉನ್ನತ ಮಟ್ಟಕ್ಕೆ ಒಯ್ಯಬೇಕೆಂದು ತಿಳಿಸಿದರು. ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಮಹಾಂತೇಶ ನೇಮತಿ ಹಾಗೂ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




