ಸೇಡಂ : ತಾಲೂಕಿನ ಸಿಲಾರಕೋಟ್ ಗ್ರಾಮದಲ್ಲಿ ಬಹುದಿನಗಳ ಕನಸಾಗಿರುವ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸರ್ವಸಿದ್ಧತೆ ನಡೆದಿದ್ದು, ಇದೆ ಜನವರಿ ೨೧ರಂದು ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಸಿಲಾರಕೋಟ್ ಕೋಳಿ ಸಮಾಜದ ಮುಖಂಡರು ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ರಾಜ್ಯ ಕೃಷಿ ಸಮಾಜ ಪ್ರತಿನಿಧಿಗಳಾದ ಬಸವರಾಜ ಪಾಟೀಲ ಉಡಾಗಿ ಇವರನ್ನು ಆಹ್ವಾನಿಸಲಾಗಿದೆ ಎಂದು ಸಿಲಾರಕೋಟ್ ಕೋಳಿ ಸಮಾಜ ಮುಖಂಡರು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ದಾಮೋದರ ರೆಡ್ಡಿ ಪಾಟೀಲ್, ನರೇಶ್ ಪಂದುಲ್, ಶ್ರೀನಿವಾಸ್ ಕಾವಲಿ, ಕಾಶಪ್ಪ ಬೋಯಿನಿ ಸೇರಿದಂತೆ ಇನ್ನಿತರರು ಊರಿನ ಮುಖಂಡರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




