
ಸೇಡಂ: ತಾಲೂಕಿನ ಸಿಲಾರಕೊಟ್ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ೨ರ ಒಳಗೆ ನೀರು ನುಗ್ಗುತ್ತಿರುವ ಕುರಿತು ನಮ್ಮ ಭಾರತ ವೈಭವ ನ್ಯೂಸ್ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಊರಿನ ಮುಖಂಡರಾದ ವೆಂಕಟರೆಡ್ಡಿ ತಂದೆ ದಾಮೋದರ್ ರೆಡ್ಡಿ ಅವರು ಮಳೆ ನೀರು ಅಂಗನವಾಡಿ ಒಳಗಡೆ ಹೋಗದಂತೆ ಸಣ್ಣ ಪ್ರಮಾಣದ ಗೋಡೆ ನಿರ್ಮಿಸಿ ನೀರು ಬೇರೆಕಡೆ ತೆರುಲವಂತೆ ಮಾಡಿದರು.
ಅತಿ ಶೀಘ್ರವೇ ಸಿಸಿ ರಸ್ತೆ ಕೂಡಾ ಹಾಕಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಾಮಕೃಷ್ಣ ಹಡಪದ್ ಮಾತನಾಡಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




