Ad imageAd image

ಎರಡನೇ ಬೆಳಗೆ ನೀರು ಬಿಡಿ! ಅಥವಾ ಪರಿಹಾರ ಕೊಡಿ!

Bharath Vaibhav
ಎರಡನೇ ಬೆಳಗೆ ನೀರು ಬಿಡಿ! ಅಥವಾ ಪರಿಹಾರ ಕೊಡಿ!
WhatsApp Group Join Now
Telegram Group Join Now

ಸಿಂಧನೂರು:ನ ೨೫,ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ತುಂಗಭದ್ರಾ ಜಲಾಶಯ ಅವಲಂಬಿತ ನಾಲ್ಕು ಜಿಲ್ಲೆಯ ರೈತಾಪಿ ಜನರು ಎರಡನೇ ಬೆಳೆಗೆ ನೀರು ಬಿಡಿ ಅಥವಾ ಪರಿಹಾರ ಹಾಗೂ ಸಾಲ ಮನ್ನಾ ಮಾಡಿ ಎಂಬ ಘೋಷವಾಕ್ಯದಡಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ, ರಾಜ್ಯ ಸರ್ಕಾರಕ್ಕೆ ೮ ದಿನಗಳ ಕಾಲ ಗಡುವು ನೀಡಲಾಯಿತು.
ನಗರದ ಕೋಟೆ ಈರಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಾಜಿ ಸಚಿವ. ಕೆ ಓ ಎಫ್ ರಾಜ್ಯಾಧ್ಯಕ್ಷ ವೆಂಕಟರಾವ್ ನಾಡಗೌಡ ಅವರ ನೇತೃತ್ವದಲ್ಲಿ ವಿವಿಧ ವೃತ್ತಗಳ ಮೂಲಕ ಸುಮಾರು ಎರಡು ಕಿ.ಮೀ.ಪಾದಯಾತ್ರೆ ನಡೆಸಿ ಎಪಿಎಂಸಿ ಆವರಣದಲ್ಲಿ ಬಹಿರಂಗ ಸಮಾವೇಶ ನಡೆಸಲಾಯಿತು.
ಈ ಸಂದರ್ಭದಲ್ಲಿ: ದೇವದುರ್ಗ ಶಾಸಕಿ ಕರೆಮ್ಮ ನಾಯಕ, ಗುರುಮಿಟಕಲ್ ಶಾಸಕ ಶರಣೇಗೌಡ ಕಂದಕೂರು, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣರೆಡ್ಡಿ, ನೇಮಿರಾಜ ನಾಯಕ, ರಾಜಾ ವೆಂಕಟಪ್ಪ ನಾಯಕ, ಸೇರಿದಂತೆ ಜಿಲ್ಲಾಧ್ಯಕ್ಷ ವಿರುಪಾಕ್ಷಿಗೌಡ, ಧರ್ಮನಗೌಡ ಮಲ್ಕಾಪುರ, ಜಿಲಾನಿಪಾಷಾ, ಸುಮಿತ್ ತಡಕಲ್, ಅಲ್ಲಮಪ್ರಭು ಪೂಜಾರ್. ಮಹಾಂತೇಶ ಪಾಟೀಲ್ ಅತ್ತನೂರು, ಸಿದ್ದುಬಂಡಿ. ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ವೀರನಗೌಡ, ದಾಸರಿ ಸತ್ಯನಾರಾಯಣ, ಚಂದ್ರಶೇಖರ್ ಮೈಲಾರ, ವೆಂಕಟೇಶ ನಂಜಲದಿನ್ನಿ, ಸೇರಿದಂತೆ ನೂರಾರು ಕಾರ್ಯಕರ್ತರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ವರದಿ: ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!