Ad imageAd image

ಯುವಜನತೆಯಲ್ಲಿ ವೈಚಾರಿಕತೆ” ಕುರಿತು ಉಪನ್ಯಾಸ

Bharath Vaibhav
ಯುವಜನತೆಯಲ್ಲಿ ವೈಚಾರಿಕತೆ” ಕುರಿತು ಉಪನ್ಯಾಸ
WhatsApp Group Join Now
Telegram Group Join Now

ಐಗಳಿ: ಎಸ್ ಎಮ್ ವಾಯ್ ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೆಲಸಂಗ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಐಗಳಿ ಕ್ರಾಸ್ (ಮಾಣಿಕಪ್ರಭು ದೇವಸ್ಥಾನ, ಮಾಣಿಕ‌ನಗರ) ಇಲ್ಲಿ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಕಟನೂರ ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾದ ದಯಾನಂದ ಎನ್ ಎಸ್ ಇವರು “ಯುವಜನತೆಯಲ್ಲಿ ವೈಚಾರಿಕತೆ” ಕುರಿತು ಉಪನ್ಯಾಸ ನೀಡಿದರು.

ಯುವಜನತೆ ಸಮಾಜದ ರೂಢಿ, ಸಂಪ್ರದಾಯ, ನಂಬಿಕೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ಪ್ರಶ್ನಿಸುವ ಮೂಲಕ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು. ಈ ಮೂಲಕ ಸದೃಢ ದೇಶ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು. “ಯುವಕರು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ದೇಶವನ್ನು ಸದೃಢ ರಾಷ್ಟ್ರವನ್ನಾಗಿ ಮಾಡಬೇಕೆಂದು ಕರೆ ನೀಡದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ. ಬಿ. ಅಯ್. ಮಠಪತಿ ಅವರು ವಿದ್ಯಾರ್ಥಿಗಳು ಶಿಸ್ತಿನಿಂದ ನೆಡೆದುಕೊಂಡು ಶ್ರಮದಾನದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ಕುಮಾರಿ. ನಂದ ಜುಂಜರವಾಡ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು ಪ್ರಾಸ್ತಾವಿಕವಾಗಿ ಮಾತನಾಡಿದ ಶಿಬಿರಾಧಿಕಾರಿ ಶ್ರೀ ಶಿವಕುಮಾರ್ ಕೆ, ಅವರು ಯುವಜನತೆಯಲ್ಲಿ ವೈಚಾರಿಕತೆಯ ಮನೋಭಾವದ ಅಗತ್ಯತೆಯ ಕುರಿತು ತಿಳಿಸಿದರು.

ಕಾರ್ಯಕ್ರಮದ ಮತ್ತೋರ್ವ ಶಿಬಿರಾಧಿಕಾರಿಗಳಾದ ಶ್ರೀಮತಿ ರಮ್ಯ ಜೆ, ಸಹ ಶಿಬಿರಾಧಿಕಾರಿಗಳಾದ ಶ್ರೀ ಕೇದಾರ ಬಿಜ್ಜರಗಿ, ಶಿಕ್ಷಣಶಾಸ್ತ್ರ ಉಪನ್ಯಾಸಕರಾದ ಶ್ರೀ ವಿಶ್ವನಾಥ ಪಾಟೀಲ, ಡಾ. ಬಿರಾದಾರ, ಪ್ರವೀಣ್ ಬಡಿಗೇರ, ಬಿ ಐ ಪಾಟೀಲ, ರೋಹಿಣಿ ಜತ್ತಿ, ಶ್ರೀಕಾಂತ ಫಡತಾರೆ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!