ಬೆಳಗಾವಿ: ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರವೆಸಗಿದ್ದ ಆರೋಪದಲ್ಲಿ ಉಪನ್ಯಾಸಕನ್ನನ್ನು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಖಾಸಗಿ ಕಾಲೇಜಿನ ಉಪನ್ಯಾಸಕ ನಾಗೇಶ್ವರ್ ಬಂಧಿತ ಆರೋಪಿ. ವಿದ್ಯಾರ್ಥಿನಿ ಮೇಲೆ ಕಳೆದ ಎರಡು ವರ್ಷಗಳಿಂದ ನಿರಂತರ ಅತ್ಯಾಚಾರವೆಸಗಿ ಬೆದರಿಕೆ ಹಾಕಿದ್ದ.
ಲಿವಿನ್ ರಿಲೇಷನ್ ಶಿಪ್ ನಲ್ಲಿ ಇರಬೇಕು. ಕರೆದಾಗ ಬರಬೇಕು. ವಿಷಯ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಉಪನ್ಯಾಸಕ ವಿದ್ಯಾರ್ಥಿಗೆ ಬೆದರಿಕೆ ಹಾಕಿ ಕ್ರೌರ್ಯ ಮೆರೆದಿದ್ದ.
ಈ ವಿಷಯವನ್ನು ಸಂತ್ರಸ್ತ ವಿದ್ಯಾರ್ಥಿನಿ ತನ್ನ ಪೋಷಕರಿಗೆ ತಿಳಿಸಿದ್ದರು. ಸಂತ್ರಸ್ತೆಯ ತಂದೆ ಬೆಳಗಾವಿಯ ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದರು. ಪೋಕ್ಸೋ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಆರೋಪಿ ಉಪನ್ಯಾಸಕನನ್ನು ಬಂಧಿಸಿದ್ದಾರೆ.




