ರಾಯಚೂರು :ಮಲಿಯಾಬಾದ್ ಗುಡ್ಡದಲ್ಲಿನ ಚಿರತೆಯನ್ನು ಹಿಡಿಯಲು ಯಶಸ್ವಿಯಾದ ರಾಯಚೂರು ಅರಣ್ಯ ವಲಯ ಸಂರಕ್ಷಣಾಧಿಕಾರಿಗಳು .ರಾಯಚೂರಿನಲ್ಲಿ ಕೊನೆಗೂ ಬೋನಿಗೆ ಬಿದ್ದ ಚಿರತೆ ಕಳೆದ ನಾಲ್ಕು ತಿಂಗಳಿಂದ ಮಲಿಯಾಬಾದ್ ಬೆಟ್ಟ ಸೇರಿದ್ದ ಚಿರತೆ ಬೋನಿಗೆ ರಾಯಚೂರು ನಗರ, ಮಲಿಯಾಬಾದ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯಹುಟ್ಟಿಸಿದ್ದ ಚಿರತೆ ಗೋಶಾಲೆ ಹಸುಗಳು, ರೈತರ ಎತ್ತುಗಳು, ನಾಯಿಗಳನ್ನ ಕೊಂದು ಹಾಕಿತ್ತು 3 ರಿಂದ 4 ವರ್ಷದ ಗಂಡು ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿ ಚಿರತೆ ಕಾರ್ಯಾಚರಣೆಗೆ ಮೂರು ಬೋನ್ ಬೆಟ್ಟದಲ್ಲಿ ಅಳವಡಿಸಲಾಗಿತ್ತು.
ಬೋನಿಗೆ ಬೀಳಲು ನಾಯಿ, ಆಕಳು ಕರುವನ್ನ ಕಟ್ಟಿ ಹಾಕಿ ನಿರಂತರ ಕಾರ್ಯಾಚರಣೆ ಇಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಬೋನಿಗೆ ಬಿದ್ದ ಚಿರತೆ ಚಿರತೆಯನ್ನ ರಕ್ಷಿಸಿರುವ ಅರಣ್ಯ ಇಲಾಖೆ ಸಿಬ್ಬಂದಿವಿಜಯನಗರದ ಕಮಲಾಪುರ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಜೂಗೆ ಚಿರತೆ ಸ್ಥಳಾಂತರಕ್ಕೆ ಸಿದ್ಧತೆ ಮಾಡುತ್ತೇವೆಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ವರದಿ: ಗಾರಲದಿನ್ನಿ ವೀರನಗೌಡ




