ಸೇಡಂ: ತಾಲೂಕಿನ ಲಿಂಗಂಪಲ್ಲಿ ಗ್ರಾಮ ಪಂಚಾಯಿತಿಗೆ ಒಳಪಡುವ ರಾಜೋಳ ಕೆ ಗ್ರಾಮದ ಅಂಗನವಾಡಿ ಕೇಂದ್ರ ೨ ರಲ್ಲಿ ಮೂಲ ಸೌಕರ್ಯಗಳಾದ ವಿದ್ಯುತ್, ನೀರಿನ ವ್ಯವಸ್ಥೆಗಳು ಇರುವುದಿಲ್ಲ ಹಾಗೆ ಅಂಗನವಾಡಿ ಕೇಂದ್ರ ಸುತ್ತಮುತ್ತಲೂ ಚರಂಡಿ ನೀರು ತುಂಬಿ ಹೋಗುತ್ತವೆ, ಘನತ್ಯಾಜ್ಯ ವಸ್ತುಗಳಿಂದ ಮತ್ತು ಮುಳ್ಳುಕಂಟಿಗಳಿಂದ ಕೂಡಿದೆ, ಇದರಿಂದ ಮಕ್ಕಳಿಗೆ ಅನಾರೋಗ್ಯದ ತೊಂದರೆ ಆಗುತ್ತಿದೆ ಎಂದು ಅನೇಕ ಬಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು ಸಮಸ್ಯೆಯನ್ನು ಪರಿಹರಿಸುತ್ತಿಲ್ಲ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕು ಹಾಗೂ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ ಯುವ ಸೇನೆ ಮುಧೋಳ್ ವಲಯ ಘಟಕ ಉಪಾಧ್ಯಕ್ಷರಾದ ಕೈಲಾಶ್ ಮೌರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ :ವೆಂಕಟಪ್ಪ ಕೆ ಸುಗ್ಗಾಲ್