Ad imageAd image

ನಾರಾಯಣ ಮರಕುಂದ ಅವರ ನಿವೃತ್ತ ಜೀವನ ಸುಖಕರವಾಗಿರಲಿ

Bharath Vaibhav
ನಾರಾಯಣ ಮರಕುಂದ ಅವರ ನಿವೃತ್ತ ಜೀವನ ಸುಖಕರವಾಗಿರಲಿ
WhatsApp Group Join Now
Telegram Group Join Now

ಚಿಟಗುಪ್ಪ : ಶಿಕ್ಷಣ ಕ್ಷೇತ್ರ ಅತ್ಯಂತ ಗೌರವ ವಾದಂತಹ ಕ್ಷೇತ್ರವಾಗಿದೆ.ಇದರಲ್ಲಿ ನಡೆದಷ್ಟು ದಾರಿ ಇದೆ, ಮತ್ತು ಪಡೆದಷ್ಟು ಭಾಗ್ಯವಿದೆ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ರಾಜಪ್ಪ ಜಮಾದಾರ ಹೇಳಿದರು.

ಚಿಟಗುಪ್ಪಾ ತಾಲ್ಲೂಕಿನ ಶಾಮತಾಬಾದ ಗ್ರಾಮದಲ್ಲಿ ಶನಿವಾರ ಹಳೆ ವಿದ್ಯಾರ್ಥಿಗಳ ಬಳಗ ಶಾಮತಾಬಾದ,ಎಸ್ಡಿಎಂಸಿ ಸಮಿತಿ ಶಾಮತಾಬಾದ ಹಾಗೂ ಶಾಲಾ ಸಿಬ್ಬಂದಿ ವರ್ಗ ಶಾಮತಾಬಾದ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕ ನಾರಾಯಣ ಮರಕುಂದ ರವರ ನಿವೃತ್ತಿ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾರಾಯಣ ಮರಕುಂದ ಅವರು ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಿ ಅದು ಶಾಮತಾಬಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವುದು ನಿಮ್ಮ ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ.

ತಮ್ಮ ಸೇವಾ ಅವಧಿಯಲ್ಲಿ ಬಹಳಷ್ಟು ಜನ ಶಿಷ್ಯಂದಿರ ಮತ್ತು ಅಭಿಮಾನಿ ಬಳಗವನ್ನು ಹೊಂದಿರುವ ಇವರು ತಮ್ಮ ನಿವೃತ್ತಿ ಜೀವನದಲ್ಲಿ ಸಮಾಜದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಮತ್ತು ಶೈಕ್ಷಣಿಕ ಬೆಳವಣಿಗೆಗಾಗಿ ಮಾರ್ಗದರ್ಶನ ನೀಡುವಂತಹ ಕೆಲಸ ಇವರಿಂದ ನಡೆಯಲಿ ಎಂದು ಹೇಳಿದರು.

ಬಳಿಕ ನಿವೃತ್ತ ಶಿಕ್ಷಕ ನಾರಾಯಣ ಮರಕುಂದ ಅವರನ್ನು ಶಾಮತಾಬಾದ ಗ್ರಾಮದ ಪ್ರಮುಖ ಬಿದಿಗಳಲ್ಲಿ ಭವ್ಯ ಮೆರವಣಿಗೆ ಮಾಡಿದರು.ಪ್ರಸ್ತಕ ಸಾಲಿನ ಶಾಲಾ ವಿದ್ಯಾರ್ಥಿಗಳು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.

ಈ ಸಂದರ್ಭದಲ್ಲಿ ಶಾಮತಬಾದ ಸರ್ಕಾರಿ ಪ್ರಾಥಮಿಕ ಶಾಲಾ ಸಿಬ್ಬಂದಿಗಳು,ಯುವಕರು,ಗ್ರಾಮಸ್ಥರು ಹಹಾಗೂ ವಿದ್ಯಾರ್ಥಿಗಳು ಇದ್ದರು.

ವರದಿ : ಸಜೀಶ ಲಂಬುನೋರ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!