ಕಾಗವಾಡ :ಕೆಎಎಸ, ಐಪಿಎಸ, ಎಂಬಿಬಿಎಸ, ಪಿಎಸ್‌ಐ, ಪಿಡಿಒ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಅನೇಕ ಉನ್ನತ ಹುದ್ದೆಗಳಗಾಗಿ ಅವಶ್ಯಕತೆ ಇರುವ ಎಲ್ಲ ಪುಸ್ತಕಗಳ ವ್ಯವಸ್ಥೆ ಈ ಗ್ರಂಥಾಲಯದಲ್ಲಿ ಮಾಡಲಾಗಿದ್ದು ಈ ಪುಸ್ತಕಗಳು ಉಚಿತವಾಗಿ ಲಭ್ಯವಿದೆ ಇವುಗಳನ್ನು ಓದಿ ಅಧ್ಯಯನ ಮಾಡಲು ಬಳಸುವ ವ್ಯವಸ್ಥೆ ಮಾಡಿದ್ದಾರೆ ಯುವಕರುಸದುಪಯೋಗ ಪಡಿಸಿಕೊಳ್ಳಬೇಂದು ಶಾಸಕ ರಾಜು ಕಾಗೆ ಹೇಳಿದರು.
ಅವರು ಮಂಗಳವಾರ ತಾಲೂಕಿನ ಐನಾಪುರ ಪಟ್ಟಣದ ಶ್ರೀ ಸಿದ್ದೇಶ್ವರ ಸಸೋದ್ಯಾನದಲ್ಲಿ ಅರಣ್ಯ ಇಲಾಖೆಯ ಪ್ರಾದೇಶಿಕ ವಲಯ ಅಥಣಿ ಇವರು ಆಯೋಜಿಸಿದ ಹಸಿರು ಗ್ರಂಥಾಲಯವನ್ನು ಸಸಿಗೆ ಪೂಜೆ ಸಲ್ಲಿಸುವದರ ಮೂಲಕ ಉದ್ಘಾಟಸಿ ಮಾತನಾಡುತ್ತಾ ಹಚ್ಚು ಹಸಿರಾಗಿ ಪರಿವರ್ತನೆಗೊಂಡಿರುವ ಉದ್ಯಾನದಲ್ಲಿ ಪಟ್ಟಣದ ಹಾಗೂ ಹೊರ ಗ್ರಾಮದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಏಕಾಗ್ರತೆಯಿಂದ ಓದಿ ತಮ್ಮ ಭವಿಷ್ಯ ನಿರ್ಮಿಸಲು ಅರಣ್ಯ ಇಲಾಖೆ ವತಿಯಿಂದ ಹಸಿರು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳಬೇಕು.
ಮತ್ತುಇಂದಿನ ವಿದ್ಯಾರ್ಥಿಗಳಿಗೆ ಸಿದ್ದೇಶ್ವರ ಸ್ವಾಮೀಜಿ ,ವಿವೇಕಾನಂದ, ಮಹಾಮುನಿಗಳ ವಿಚಾರಗಳನ್ನು ದೇಶದ ಇತಿಹಾಸ ಮಹಾನುಭಾವರ ಜೀವನ ತಿಳಿದುಕೊಳ್ಳಲು ಒಳ್ಳೆ ಪುಸ್ತಕಗಳನ್ನು ಇಲ್ಲಿಗೆ ನೀಡಿರಿ ಅವುಗಳನ್ನು ಓದಿ ಅವರ ಜೀವನದಲ್ಲಿ ಬದಲಾವಣೆ ತರಲು ಸಹಾಯವಾಗಲಿದೆ.ಎಂದ ಅವರು
ಪಟ್ಟಣದ ಗ್ರಾಮದೇವತೆ ಶ್ರೀ ಸಿದ್ದೇಶ್ವರ ದೇವರ ಮಂದಿರ ಹತ್ತಿರ 13 ಎಕರೆ ಕ್ಷೇತ್ರದ ಶ್ರೀ ಸಿದ್ದೇಶ್ವರ ಕೆರೆ ಅಭಿವೃದ್ಧಿ ಗೊಳಿಸಿ ಸುಮಾರು ನಾಲ್ಕು ಸಾವಿರ ಸಸಿಗಳನ್ನು ನಟಿ ಅವುಗಳನ್ನು ಬೆಳೆಸಿ ಎಲ್ಲ ಸಾರ್ವಜನಿಕರಿಗಾಗಿ ಒಂದು ಹೆಸರಾಂತ ಉದ್ಯಾನ ನಿರ್ಮಿಸಿದ್ದಾರೆ
ರಾಜ್ಯದಲ್ಲಿ ಪ್ರಪ್ರಥಮ ಪ್ರಯೋಗವಾಗಿದೆ ಇದೇ ರೀತಿ ಕ್ಷೇತ್ರದ ಇನ್ನುಳಿದ ಗ್ರಾಮಗಳಲ್ಲಿ ಸಸಿಗಳನ್ನು ನಟಿ ಪರಿಸರ ಉಳಿಸಿ ಬೆಳೆಸಲು ಎಲ್ಲರೂ ಸಹಕರಿಸಿರಿ
ಖಾಲಿ ಉಳಿದು ಹರಟೆ ಹೊಡೆಯುತ್ತಾ ಕಾಲ ಹರಣ ಮಾಡದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಯುವಕರಿಗೆ ಕರೆ ನೀಡಿದರು.
ಅರಣ್ಯ ಇಲಾಖೆಯ ವಲಯ ಅಧಿಕಾರಿ ರಾಕೇಶ ಅರ್ಜುನವಾಡ ಮಾತನಾಡಿ ಐನಾಪುರದ ಶ್ರೀ ಸಿದ್ದೇಶ್ವರ ಸಸೋಉಧ್ಯಾನ ದಲ್ಲಿ ಪ್ರಥಮ ಬಾರಿಗೆ ಹಸಿರು ಗ್ರಂಥಾಲಯ ಪ್ರಾರಂಭಿಸಿದ್ದು ಇಲ್ಲಿಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಳಸುವ ಪುಸ್ತಕಗಳ ವ್ಯವಸ್ಥೆ ಮಾಡಲಾಗಿದೆ, ಇದನ್ನು ಯುವಕರು ಬಳಸಿ ಸಮಾಜದಲ್ಲಿ ಒಳ್ಳೆ ಅಧಿಕಾರಿ ಎಂದು ಹೊರಹೊಮ್ಮಿರಿ ಎಂದು ಕರೆ ನೀಡಿದರು.
ಇ ಸಂದರ್ಭದಲ್ಲಿ ತಾಲೂಕ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣಾ ವಾಲಿ, ಉಪತಹಸಿಲ್ದಾರ ಅಣ್ಣಾಸಾಬ ಕೊರೆ, ಪಟ್ಟಣ ಪಂಚಾಯಿತಿ ಸದಸ್ಯ ಅರುಣ ಗಾಣಿಗೇರ ಸಂಜಯ ಭೀರಡಿ,ಸುಭಾಷ ಪಾಟೀಲ, ರಾಜುಗೌಡ ಪಾಟೀಲ, , ದಾದಾ ಜಂತನ್ನವರ, ಪ್ರಾಚಾರ್ಯ ಬಿ.ಪ್ರೇಮಾನಂದ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಎನ್ ಬಿ ನದಾಫ, ಎಂ. ಎಸ. ಮಾಹುಲಿ, ಆರ್ ಎಂ ಹೊಸಪೇಟೆ, ವಿನೋದ ಮಾಲಗಾವೆ ಸೇರಿದಂತೆ ಇತರರು ಇದ್ದರು.
ವರದಿ: ಚಂದ್ರಕಾಂತ ಕಾಂಬಳೆ




