ಬೆಂಗಳೂರು : ನಮ್ಮ ದೇಶ ನಮ್ಮ ನಾಡಿನ ಮಹಿಳೆಯರಿಗೆ ಪ್ರಾಮುಖ್ಯತೆ ಕೊಡುವ ಒಂದು ಅತ್ಯಂತ ತಾಣವಾಗಿದೆ ಮತ್ತು ಹೆಣ್ಣಿನ್ನು ಸಂಸಾರದ ಕಣ್ಣು ಎಂದು ಹೇಳಿದರು
ತಪ್ಪಾಗಲಾರದು ತನ್ನ ಸಂಸಾರದ ಭಾರವನ್ನು ಒಬ್ಬ ಹೆಣ್ಣು ಹೊರುತ್ತಾಳೆ ಆದ್ದರಿಂದ ನಮ್ಮ ದೇಶದಲ್ಲಿ ಹೆಣ್ಣಿಗೆ ಮಹತ್ವವಾದ ಪೂಜ್ಯನ ಸ್ಥಾನ ಇದೆ ಎಂದು ತಿಪ್ಪೇಸ್ವಾಮಿ ಹೇಳಿದರು.
ಬೆಂಗಳೂರು ಹೊರವಲಯದ ತುಮಕೂರು ರಸ್ತೆಯ ಎಪಿಎಂಸಿ ವ್ಯಾಪ್ತಿಯಲ್ಲಿರುವ ಮಂತ್ರಿ ಬಡಾವಣೆಯಲ್ಲಿ ಸ್ಪೆರ್ಲಿನ್ ಫೌಂಡೇಶನ್ ಹಾಗೂ ಫೆಡರಲ್ ಬ್ಯಾಂಕ್ ಸಹಯೋಗದಲ್ಲಿ ಸ್ಪೆರ್ಲಿಂಗ್ ಸಂಸ್ಥೆಯಲ್ಲಿ ಬೆಂಗಳೂರಿನ ಕೋ ಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ತಿಪ್ಪೇಸ್ವಾಮಿ ರವರ ಮುಂದಾಳತ್ವದಲ್ಲಿ ಬಡ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ, ಬ್ಯೂಟಿ ಪಾರ್ಲರ್ ಸಾಮಗ್ರಿಗಳು ಇನ್ನು ಹಲವಾರು ರೀತಿಯ ಸಾಮಗ್ರಿಗಳನ್ನು ಉಚಿತವಾಗಿ ನೀಡುವ ಸಮಾರಂಭವನ್ನು ಹಮ್ಮಿಕೊಂಡಿದ ಕಾರ್ಯ ಕ್ರಮಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿ ತಿಪ್ಪೇಸ್ವಾಮಿ ಮಾತನಾಡಿ ನಮ್ಮ ನಾಡಿನಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳೇ ಹೆಚ್ಚಿನ ರೀತಿಯಲ್ಲಿ ಕಷ್ಟದ ಜೀವನ ಸಾಗಿಸುತ್ತಿದ್ದಾರೆ ಆದ್ದರಿಂದ ಇದೆಲ್ಲವನ್ನರಿತ ಸ್ಪೆರ್ಲನ್ ಫೌಂಡೇಶನ್ ಹಾಗೂ ಫೆಡರಲ್ ಬ್ಯಾಂಕ್ ಇಂತಹ ಹಿಂದುಳಿದ ಕುಟುಂಬಗಳನ್ನು ಗುರುತಿಸಿ ಆ ಕುಟುಂಬದ ಜೀವನಕ್ಕಾಗಿ ತನ್ನ ಮಕ್ಕಳ ವಿದ್ಯಾಭ್ಯಾಸ ಹಾಗೂ ಮುಂದಿನ ಭವಿಷ್ಯಕ್ಕಾಗಿ ಸಂಸಾರವನ್ನು ಸಾಗಿಸಲು ದುಡಿಯುವ ಕೈಗಳಿಗೆ ಕೆಲಸ ನೀಡುವ ಸಲುವಾಗಿ ಈ ಎರಡು ಸಂಸ್ಥೆಗಳು ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಹೊಲಿಗೆ ಯಂತ್ರ .ಬ್ಯೂಟಿ ಪಾರ್ಲರ್ ಗಳಿಗೆ ಬೇಕಾದ ಸಾಮಗ್ರಿಗಳು. ವ್ಯಾಪಾರ ಮಾಡಲು ತಳ್ಳುವ ಗಾಡಿ. ಪಾನಿಪುರಿ ಗಾಡಿ. ಸಣ್ಣ ಹೋಟೆಲ್ ಗಳು ನಡೆಸಲು ಪಾತ್ರೆ ಸಾಮಗ್ರಿಗಳು, ಹೀಗೆ ಹಲವಾರು ಕಾರ್ಯಗಳನ್ನು ನಿರ್ವಹಿಸಲು ಹಲವಾರು ರೀತಿಯ ಸಾಮಗ್ರಿಗಳನ್ನು ಸುಮಾರು 30 ರಿಂದ 40 ಜನ ಮಹಿಳೆಯರಿಗೆ ಉಚಿತವಾಗಿ ವಿತರಿಸಲಾಯಿತು.
ಈ ಸಂಸ್ಥೆಗಳು ನಿಮ್ಮ ಕಷ್ಟವನ್ನು ಅರಿತು ನಿಮಗೆ ನೀಡಿರುವ ಯಂತ್ರಗಳು ಹಾಗೂ ಸಾಮಗ್ರಿಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ತಮ್ಮ ಮುಂದಿನ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಮತ್ತು ಸಂಸ್ಥೆಗಳ ಕೀರ್ತಿ ತರಬೇಕು ಮತ್ತು ನೀವು ಸಹ ಬೆಳೆಯಬೇಕು ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ತಿಪ್ಪೇಸ್ವಾಮಿ ಮಹಿಳೆಯರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕವಿತಾ, ಶಿಕ್ಷಣ ಇಲಾಖೆಯ ಮಂಜುನಾಥ್, ರೇಣುಕಾ ಪ್ರಸಾದ್ ,ಪೊಲೀಸ್ ಇಲಾಖೆಯ ಅರವೀಂದ ಕುಮಾರ್, ಯೋಗ ಗುರುಗಳಾದ ಡಾ. ಜಗದೀಶ್, ಕುಮಾರ್, ಮಹಿಳಾ ಫಲಾನುಭವಿಗಳು ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಭಾಗವಹಿಸಿದ್ದರು.
(ವರದಿ: ಅಯ್ಯಣ್ಣ ಮಾಸ್ಟರ್