ದಿನಾಂಕ 29-7-2025 ಮಂಗಳವಾರ ರಂದು ನಾಗರ ಪಂಚಮಿ ದಿನದಂದು ಸಂಜೆ 6.30 ನಿಮೀಷಕ್ಕೆ ಸಾವಿರಾರು ಭಕ್ತಾಧಿಗಳನ್ನು ಒಳಗೋಂಡ ಶ್ರೀ ಶ್ರೀ ಶ್ರೀ ಕರಿಯಪ್ಪ ತಾತನವರ ಜಾತ್ರಾ ರಥ ಮಹೋತ್ಸವನ್ನು ಭಕ್ತಿ ಶ್ರಧ್ಧೆಯಿಂದ ಶಾಂತಿಯುತವಾಗಿ ಆಚರಿಸೋಣವೆಂದು ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ರವರು ನುಡಿದರು.

ಅವರಿಂದು ಶಾಸಕರ ಕಛೇರಿಯಲ್ಲಿ ಶ್ರೀ ಕರಿಯಪ್ಪ ತಾತನವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯನ್ನು ತಾಲ್ಲೂಕ ದಂಡಾದಿಕಾರಿ ಹಾಗೂ ತಾಲ್ಲೂಕ ಅಧಿಕಾರಿಗಳು ಸ್ವಚ್ಛತೆಗೆ ನೀರಿಗೆ ಹಾಗೂ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಶಾಸಕರು ಆದೇಶಿಸಿದರು ಅಂದಾಜು ಲಕ್ಷಾಂತರ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವ ಭಕ್ತಾಧಿಗಳಿಗೆ ಯಾವ ತೊಂದರೆ ಆಗದಂತೆ ನಿಗಾ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ
1. ಕಂದಾಯ ಇಲಾಖೆ
2. ಗ್ರಾಮೀಣಾಭಿವೃದ್ಧಿ ಇಲಾಖೆ
3. ಪೋಲಿಸ್ ಇಲಾಖೆ
4. ಆರೋಗ್ಯ ಇಲಾಖೆ.
5. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
6. ಗ್ರಾಮೀಣ ಕುಡಿಯುವ ನೀರು
7. ಲೋಕೋಪಯೋಗಿ ಇಲಾಖೆ
8. ಪಂಚಾಯತರಾಜ್ ಇಂಜಿನಿಯರಿಂಗ್
9. ಜೆಸ್ಕಾಂ
10. ಅಬಕಾರಿ ಇಲಾಖೆ
11. DM KSRTC Manvi
ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮಖಂಡರುಗಳು, ನಾಮನಿರ್ದೆಶನ ಸದಸ್ಯರುಗಳು ಗ್ರಾ. ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಗ್ರಾಮಸ್ಥರು, ಉಪಸ್ಥಿತರಿದ್ದರು.
ವರದಿ: ಗಾರಲ ದಿನ್ನಿ ವೀರನ ಗೌಡ




