ಮಳವಳ್ಳಿ : ತಾಲ್ಲೂಕಿನಲ್ಲಿ ಬಸವ ಕೇಂದ್ರವನ್ನು ಸಂಘಟಿಸಿ ಉತ್ತಮವಾಗಿ ನಾವೆಲ್ಲರೂ ಬೆಳೆಸೋಣ ಎಂದು ಬಸವಕೇಂದ್ರ ಗೌರವಾಧ್ಯಕ್ಷ ಬಾಲಚಂದ್ರ ತಿಳಿಸಿದರು.
ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಜಿಲ್ಲಾ ಬಸವ ಕೇಂದ್ರ ಹಾಗೂ ತಾಲ್ಲೂಕು ಬಸವ ಕೇಂದ್ರದ ವತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಎಲ್ಲರೂ ಬಸವಕೇಂದ್ರವನ್ನು ಅಭಿವೃದ್ದಿಯತ್ತ ತೆಗೆದುಕೊಂಡು ಹೋಗುವುದಕ್ಕೆ ಶ್ರಮಿಸೋಣ ಎಂದರು.
ಈ ವೇಳೆ ಬಸವಕೇಂದ್ರ ಅಧ್ಯಕ್ಷ ತೊಟ್ಟಿಮನೆಚನ್ನಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಬಸವ ಕೇಂದ್ರದಿಂದ ಸಾಕಷ್ಟು ಕಾರ್ಯಕ್ರಮ ನಡೆದಿದ್ದು, ಎಲ್ಲಾ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದು, ನನ್ನನ್ನು ಎರಡು ಬಾರಿ ಅಧ್ಯಕ್ಷರನ್ನಾಗಿ ಮಾಡಿದ್ದು ಈ ಬಾರಿ ಇನ್ನೊಂದು ಆವಕಾಶ ನೀಡಿದರೆ ಮತ್ತಷ್ಟು ಕಾರ್ಯಕ್ರಮಮಾಡುವುದಾಗಿ ತಿಳಿಸಿದರು.
ಅಂತೆಯೇ ಪದಾಧಿಕಾರಿಗಳು ಎಲ್ಲರೂ ಒಕ್ಕೊರಿಲಿನಿಂದ ಮೂರು ಬಾರಿಗೆ ತಾಲ್ಲೂಕು ಬಸವಕೇಂದ್ರದ ಅಧ್ಯಕ್ಷರಾಗಿ ತೊಟ್ಟಿಮನೆಚನ್ನಪ್ಪ ಆಯ್ಕೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಬಸವ ಪ್ರಿಯ ನಾಗರಾಜು, ತಾಲ್ಲೂಕು ಅಧ್ಯಕ್ಷ ತೊಟ್ಟಿಮನೆಚನ್ನಪ್ಪ, ಗೌರವಾಧ್ಯಕ್ಷ ಬಾಲಚಂದ್ರ, ಸೋಮೇಶ್, ಬೂವಳ್ಳಿ ನಟರಾಜು, ಹೆಚ್ ಆರ್ ,ವಿಶ್ವ ಸೇರಿದಂತೆ ಹಲವರು ಇದ್ದರು.




