Ad imageAd image

ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸೋಣ : ಶ್ರೀಕಾಂತ ತಳವಾರ

Bharath Vaibhav
ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸೋಣ : ಶ್ರೀಕಾಂತ ತಳವಾರ
WhatsApp Group Join Now
Telegram Group Join Now

ಅಥಣಿ : ಲೋಕಸಭಾ ಕಾಂಗ್ರೆಸ್ ಪಕ್ಷಕ್ಕೆ ಕೈ ಜೋಡಿಸೋಣ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಬೆಳಗಾವಿ ಜಿಲ್ಲಾ ಸಂಚಾಲಕರಾದ ಶ್ರೀಕಾಂತ ತಳವಾರ ಹೇಳಿದರು.

ಅವರು ಅಥಣಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ ಸಂಚಾಲಕರಾದ ಡಾಕ್ಟರ್ ಡಿ ಜಿ ಸಾಗರ್ ಅವರ ಆದೇಶದ ಮೇರೆಗೆ ಇಂದು ಅಥಣಿ ಮತ್ತು ಕಾಗವಾಡದ ದಲಿತ ಕಾರ್ಯಕರ್ತರು ಸೇರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಕರಪತ್ರ ವಿತರಣೆ ಮಾಡಲಾಯಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದಾರೆ ಸರ್ಕಾರದ ಯೋಜನೆಗಳು ಬಡವರಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರಜಾಪ್ರಭುತ್ವದಲ್ಲಿ ಒಳ್ಳೆ ನಿರ್ಣಯ ತೆಗೆದುಕೊಳ್ಳುವ ಮತದಾರರು. ಅದಕ್ಕೆ ನೀವು ಎಲ್ಲರೂ ಒಳ್ಳೆ ನಿರ್ಣಯ ತೆಗೆದುಕೊಂಡು ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಯಾದ ಪ್ರಿಯಂಕಾ ಜಾರಕಿಹೊಳೆ ಅವರ ಕಾಂಗ್ರೆಸ ಪಕ್ಷದ ಗುರುತಿಗೆ ಮತ ಹಾಕಬೇಕು ಕರೆ ನೀಡಿದರು.

ನಂತರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಘಟನಾ ಸಂಚಾಲಕ ಸಂಜಯ ತಳವರಕರ ಮಾತನಾಡಿ ರಾಜ ಸಂಚಾಲಕರಾದ ಡಾಕ್ಟರ್ ಡಿ ಜಿ ಸಾಗರ ಅವರ ಆದೇಶದ ಮೇರೆಗೆ ಕರಪತ್ರದ ಮೂಲಕ ಕಾಂಗ್ರೆಸ್ಸನ್ನು ಬೆಂಬಲಿಸುವುದರ ಆದೇಶವನ್ನು ಅಥಣಿ ಮತ್ತು ಕಾಗವಾಡ ತಲುಪಿಸುವಂತಹ ಕೆಲಸ ನಾವು ಮಾಡುತ್ತೇವೆ. ಸವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೋಮವಾದಿ ಪಕ್ಷವನ್ನು ಧಿಕ್ಕರಿಸಿ ಜನಪರ ಕೆಲಸ ಮತ್ತು ಚಿಂತನೆಗಳನ್ನು ಮಾಡುವ ಪಕ್ಷವನ್ನು ಬೆಂಬಲಿಸುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವ ಕಾಂಗ್ರೆಸ್ ಪಕ್ಷವನ್ನು ನಾ ರವಿ ಕಾಂಬಳೆ ವೆಲ್ಲರೂ ಕೂಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿ ಬರುವ ಮೇ 7ರಂದು ನಡೆಯುವ ಚುನಾವಣೆಯಲ್ಲಿ ಚಿಕ್ಕೋಡಿ ಮತ್ತು ಬೆಳಗಾವ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಿಂತಿರುವ ಪ್ರಿಯಾಂಕಾ ಜಾರಕಿಹೊಳಿ ಅವರ ಕಾಂಗ್ರೆಸ್ ಪಕ್ಷದ ಗುರುತಿಗೆ ಮತ ನೀಡುವುದಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಥಣಿ ಸಂಚಾಲಕರಾದ ರವಿ ಕಾಂಬಳೆ ಕಾಗವಾಡ ಸಂಚಾಲಕ ಸಚಿನ್ ಪೂಜಾರಿ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ಕುಮಾರ ಬನಸೋಡೆ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮಚ್ಚೀಂದ್ರ ಖಾ oಡೇಕರ, ವಿಜಯ ಅಸೋದೆ, ಪಾಂಡು ಕಾಂಬಳೆ, ವಿಶಾಲ್ ದೊಂಡರೆ, ದತ್ತು ಕಾಂಬಳೆ, ಅಶೋಕ್ ನಿಡೋನಿ, ಪ್ರಶಾಂತ್ ಕಾಂಬಳೆ, ದನಪಾಲ ಕಾಂಬಳೆ, ಬಾಲಕೃಷ್ಣ ಬಂಜತ್ರಿ, ಶಿವಾನಂದ ಕಾಂಬಳೆ, ಶಿವಾನಂದ ಹುಕ್ಕೇರಿ, ರಾಜು ಪವಾರ, ವಿನಾಯಕ ಕಾಂಬಳೆ, ಶಂಕರ್ ಕಾಂಬಳೆ, ಪಂಡಿತ್ ಕಾಂಬಳೆ ಲಕ್ಕಪ್ಪ ಕಾಂಬಳೆ, ಬಾಪು ದೊಂಡರೆ, ಅಶೋಕ ಸಂಬರಗಿ, ಅಶೋಕ ಕಾಂಬಳೆ, ರಾಜು ಕಾಂಬಳೆ ಇನ್ನಿತರರು ಸಂಘಟನೆ ಸದಸ್ಯರು ಉಪಸ್ಥಿತರಿದ್ದರು

ವರದಿ: ರಾಜು.ಎಮ್.ವಾಘಮಾರೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!