Mk ಹುಬ್ಬಳ್ಳಿ:-ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ Mk ಹುಬ್ಬಳ್ಳಿ ಪಟ್ಟಣದಲ್ಲಿರೋ ಶಿಥಿಲಗೊಂಡ ಗ್ರಂಥಾಲಯ ನೋಡಿದ್ರೆ ಸಾಕು ಗ್ರಂಥಾಲಯ ಇಲಾಖೆ ಎಷ್ಟು ಕಾರ್ಯ ಪ್ರವೃತ್ತ ವಾಗಿದೆ ಎಂಬುದು ಗೊತ್ತಾಗುತ್ತೆ ಕಣ್ರೀ. ಹೌದು Mk ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯಾಗಿ ದಶಕಗಳೇ ಕಳೆದರೂ ಇನ್ನೂ ಸಹ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯದ ಕಟ್ಟಡ ಹಾಗೂ ವ್ಯವಸ್ಥೆ ನೋಡಿದ್ರೆ ಸಾಕು ಅಯ್ಯೋ ಪಾಪ ಅನ್ನಿಸುತ್ತೆ.
ಈ ಕಟ್ಟಡದ ಮೇಲ್ಚಾವಣಿಯ ಮೇಲೆ ಮೇಲೆ ಗಿಡಗಂಟೆಗಳು ಬೆಳೆದು, ದಿನನಿತ್ಯ ಹೆಂಚುಗಳು ಮುರಿದು ಬೀಳುತ್ತಿವೆ. ಇನ್ನೂ ಗೋಡೆಗಳು ಸಹ ತುಂಬಾನೇ ಬಿರುಕು ಬಿಟ್ಟಿದ್ದು ಯಾವಾಗ ಬೇಕಾದ್ರೂ ಅಪಾಯ ಸಂಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲೇ ಮಳೆಗಾಲ ಇರುವುದರಿಂದ ಮಳೆ ನೀರು ಸೋರಿ ಸೋರಿ ಪುಸ್ತಕಗಳು ನೆನೆಯುತ್ತಿವೆ. Mk ಹುಬ್ಬಳ್ಳಿ ಪಟ್ಟಣವು ದಿನೇ ದಿನೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದರಿಂದ ಜನಸಂಖ್ಯೆಯು ಹೆಚ್ಚಾಗುತ್ತಿದೆ.
ಇನ್ನೂ ಪಟ್ಟಣ ಪಂಚಾಯಿತಿ ಮಟ್ಟದ ಗ್ರಂಥಾಲಯ ಆಗಬೇಕಾಗಿದ್ದು, ಇಲ್ಲಿಯವರೆಗೂ ಸಹ ಗ್ರಾಮ ಪಂಚಾಯಿತಿ ಮಟ್ಟದ್ದೇ ಇದೆ. ಆದ್ದರಿಂದ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಭೇಟಿಕೊಟ್ಟು, ಇಲ್ಲಿಗೆ ಆಗಮಿಸುವ ಓಡುಗರೊಂದಿಗೆ ಚರ್ಚೆ ಮಾಡಿ ಸಮಗ್ರವಾಗಿ ವರದಿ ತಯಾರಿಸಿ ಬೆಳಗಾವಿ ಜಿಲ್ಲಾ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ರಾಮಯ್ಯ ಹಾಗೂ Mk ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಆದ ಶರಣಬಸಯ್ಯ ಅವರ ಗಮನಕ್ಕೆ ತೆಗೆದುಕೊಂಡು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಗ್ರಂಥಾಲಯಕ್ಕೆ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ:-ಬಸವರಾಜು.