ನವದೆಹಲಿ : ಒಲಿಂಪಿಕ್ಸ್‌ನಲ್ಲಿ ಎರಡೆರಡು ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ನೀರಜ್ ಚೋಪ್ರಾಗೆ ದೊಡ್ಡ ಜವಾಬ್ದಾರಿ ನೀಡಲಾಗಿದೆ. ನೀರಜ್ ಚೋಪ್ರಾಗೆ ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿದೆ.
ಆಗಸ್ಟ್ 26, 2016 ರಂದು ಭಾರತೀಯ ಸೇನೆಯಲ್ಲಿ ವೈಬ್ ಸುಬೇದಾರ್ ಹುದ್ದೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಆಗಿ ನೀರಜ್ ಕಾರ್ಯ ಆರಂಭಿಸಿದ್ರು. ಅವರಿಗೆ ಎರಡು ವರ್ಷಗಳ ಬಳಿಕ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದರು. ಟ್ರ್ಯಾಕ್ ಹಾಗೂ ಫೀಲ್ಡ್ ವಿಭಾಗದಲ್ಲಿ ಬಂಗಾರದ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಕಳೆದ ವರ್ಷ ಪ್ಯಾರೀಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ಎರಡು ಒಲಿಂಪಿಕ್ಸ್ ಪದಕ ಗೆದ್ದ ಕೆಲವೇ ಕೆಲವು ಕ್ರೀಡಾಪಟುಗಳ ಸಾಲಿಗೆ ನೀರಜ್ ಚೋಪ್ರಾ ಸೇರಿದ್ದಾರೆ.