Ad imageAd image

ವೃತ್ತಿಯಿಂದ ನಿವೃತ್ತಿಯಾದ ಜಿ.ಕೆ.ಹೆಗಡೆ ಅಭಿನಂದಿಸಿದ ಜೀವವಿಮಾ ನಿಗಮ

Bharath Vaibhav
ವೃತ್ತಿಯಿಂದ ನಿವೃತ್ತಿಯಾದ ಜಿ.ಕೆ.ಹೆಗಡೆ ಅಭಿನಂದಿಸಿದ ಜೀವವಿಮಾ ನಿಗಮ
WhatsApp Group Join Now
Telegram Group Join Now

ತುರುವೇಕೆರೆ: –ಪಟ್ಟಣದ ಭಾರತೀಯ ಜೀವ ವಿಮಾ ನಿಗಮದಲ್ಲಿ ಅಭಿವೃದ್ದಿ ಅಧಿಕಾರಿಯಾಗಿದ್ದ ಜಿ.ಕೆ.ಹೆಗಡೆಯವರು ಸೇವಾವೃತ್ತಿಯಿಂದ ವಯೋನಿವೃತ್ತಿ ಹೊಂದಿದರು. ಈ ಹಿನ್ನೆಲೆಯಲ್ಲಿ ಜೀವವಿಮಾ ನಿಗಮದ ಅಧಿಕಾರಿಗಳು, ಪ್ರತಿನಿಧಿಗಳು, ಹಿತೈಷಿಗಳು ಹೆಗಡೆಯವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಎಲ್ಐಸಿ ಛೇರ್ಮನ್ ಕ್ಲಬ್ ಸದಸ್ಯ ಅಮಾನಿಕೆರೆ ಮಂಜುನಾಥ್, ವೃತ್ತಿಯಲ್ಲಿರುವ ಪ್ರತಿಯೊಬ್ಬರಿಗೂ ನಿವೃತ್ತಿ ಎಂಬುದು ಸರ್ವೇಸಾಮಾನ್ಯ. ಸರ್ಕಾರದ ನಿಯಮದ ಪ್ರಕಾರ ವೃತ್ತಿಯಲ್ಲಿರುವ ವ್ಯಕ್ತಿಗೆ 60 ವರ್ಷ ಆಗುತ್ತಿದ್ದಂತೆ ವಯೋನಿವೃತ್ತಿಯನ್ನು ಹೊಂದಲೇಬೇಕು. ಆದರೆ ವೃತ್ತಿಯಲ್ಲಿದ್ದಾಗ ನಾವು ಮಾಡಿದ ಜನಪರ ಸೇವೆ, ಒಳ್ಳೆಯ ಕೆಲಸಗಳು ನಿವೃತ್ತಿಯ ನಂತರವೂ ನಮ್ಮನ್ನು ಸಮಾಜದಲ್ಲಿ ಗುರುತಿಸಲ್ಪಡುವಂತಿರಬೇಕು. ಅಂತಹ ಕೆಲಸವನ್ನು ವೃತ್ತಿಯಲ್ಲಿದ್ದಾಗ ಹೆಗಡೆಯವರು ಮಾಡಿದ್ದು, ಇಂದು ವೃತ್ತಿಯಿಂದ ನಿವೃತ್ತರಾಗಿ, ಕಛೇರಿಯಲ್ಲಿ ನಮ್ಮೊಂದಿಗೆ ದಿನನಿತ್ಯ ಇರದಿದ್ದರೂ ಅವರ ಒಳ್ಳೆಯತನ, ಕರ್ತವ್ಯನಿಷ್ಠೆ, ಸ್ನೇಹಪರತೆಯಿಂದ ನಮ್ಮ ಹೃದಯದಲ್ಲಿ ಶಾಶ್ವತವಾಗಿರುತ್ತಾರೆ ಎಂದರು.

ಕಳೆದ ಎರಡು ದಶಕಗಳಿಂದ ತುರುವೇಕೆರೆ ತಾಲ್ಲೂಕಿನ ಜನತೆಗೆ ಜೀವ ವಿಮಾ ನಿಗಮದ ಮೂಲಕ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿದ್ದ ಜಿ.ಕೆ.ಹೆಗಡೆಯವರು ತಮ್ಮ ಜೀವವಿಮಾ ನಿಗಮದ ಕುಟುಂಬದ ಸೇವೆಯಿಂದ ನಿವೃತ್ತಿ ಹೊಂದಿ ವಿಶ್ರಾಂತ ಜೀವನ ನಡೆಸಲು ತೆರಳುತ್ತಿರುವುದು ಒಂದೆಡೆ ಸಂತೋಷದ ವಿಚಾರವಾದರೂ, ಮತ್ತೊಂದೆಡೆ ಕಛೇರಿಯಲ್ಲಿ ಅವರ ಅನುಪಸ್ಥಿತಿ ನಮ್ಮನ್ನು ಕಾಡಲಿದೆ. ಯಾವುದೇ ಸಮಯವಾದರೂ ವಿಮೆಗೆ ಸಂಬಂಧಿಸಿದ ಯಾವುದೇ ವಿಷಯವಾದರೂ ಕ್ಷಣಮಾತ್ರದಲ್ಲಿ ಉತ್ತರಿಸಿ ಪ್ರತಿನಿಧಿಗಳ ಸಮಸ್ಯೆಗಳಿಗೆ ಅಗತ್ಯ ಸಹಕಾರ ನೀಡುತ್ತಿದ್ದ ಹೆಗಡೆ ಎಂಬ ಮಾನವೀಯ ಮೌಲ್ಯವುಳ್ಳ ವ್ಯಕ್ತಿಯನ್ನು ನಾವು ವೃತ್ತಿಪರತೆಯಿಂದ ಕಳೆದುಕೊಳ್ಳುತ್ತಿರುವುದು ನೋವಾಗುತ್ತಿದೆ. ಆದರೂ ಅವರ ವಿಶ್ರಾಂತ ಜೀವನ, ಕೌಟುಂಬಿಕ ಬದುಕು ಉತ್ತಮವಾಗಿರಲಿ, ನಮ್ಮೊಂದಿಗಿನ ಆತ್ಮೀಯತೆ, ಸ್ನೇಹ ನಿವೃತಿಯ ನಂತರವೂ ಹೀಗೆ ಮುಂದುವರೆಯಲಿ, ಭಗವಂತ ಅವರ ಕುಟುಂಬಕ್ಕೆ ಒಳಿತನ್ನು ಮಾಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ತುರುವೇಕೆರೆ ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಜಿ.ಕೆ.ಹೆಗಡೆಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಜೀವವಿಮಾ ನಿಗಮದ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಹಿರಿಯ ಪ್ರತಿನಿಧಿಗಳಾದ ಪರಮೇಶ್ವರಯ್ಯ, ಮರಿಸ್ವಾಮಿ, ಸತೀಶ್ ಸೇರಿದಂತೆ ಜೀವವಿಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!