Ad imageAd image

ಉಪ್ಪಿನಮೋಳೆ ಗ್ರಾಮದಲ್ಲಿ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ

Bharath Vaibhav
ಉಪ್ಪಿನಮೋಳೆ ಗ್ರಾಮದಲ್ಲಿ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ
WhatsApp Group Join Now
Telegram Group Join Now

ಚಾಮರಾಜನಗರ:-ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ರವರ 03ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಉಪ್ಪಿನಮೋಳೆ ಆಯೋಜಿಸಲಾಯಿತು.

ಯಳಂದೂರು ಪೊಲೀಸ್ ಠಾಣಾ ಪಿ ಎಸ್ ಐ. ಹನುಮಂತ್ ಪುಪ್ಪರ್ ರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು, ಹಾಗೂ ಗಣ್ಯರು ಪುನೀತ್ ರಾಜಕುಮಾರ್ ಭಾವಚಿತ್ರಕೆ ಪುಷ್ಪಅರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕೆ ಶುಭಾ ಆರೈಸಿದರು.

ಈ ಸಂದರ್ಭದಲ್ಲಿ ಹನುಮಂತ್ ಉಪ್ಪಾರ್ ಮಾತನಾಡಿ ಕಬ್ಬಡಿ ನಮ್ಮ ಮಣ್ಣಿನ ಆಟ ನಾವು ಕಬ್ಬಡಿಯನ್ನು ಆಡಲು ಮಾಡಲು ನಮಗೆ ಧೈರ್ಯ ಬೇಕು ಕಬಡ್ಡಿ ಬಲಿಷ್ಠದ ಆಟ, ಇವಾಗಿನ ಸಂದರ್ಭದಲ್ಲಿ ಯಾವುದೇ ಊರಿಗೆ ಹೋದರು ಬ್ಯಾಟು ಬಾಲು ಎತ್ತಿಕೊಂಡು ಕ್ರಿಕೆಟ್ ಆಡಲು ಹೋಗುತ್ತಾರೆ, ಇಂತಹ ಸಂದರ್ಭದಲ್ಲಿ ಉಪ್ಪಿನ ಮೋಳೆಯ ಯುವಕರು ಕಬಡ್ಡಿ ಆಟವನ್ನು ಆಡಿಸುತಿರುವುದ ತುಂಬಾ ಖುಷಿಯಾಗಿದೆ ಎಂದು ಮಾತನಾಡಿದರು

ಈ ಸಂದರ್ಭದಲ್ಲಿ, ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ, ಎ ಆರ್ ಕೃಷ್ಣಮೂರ್ತಿ, ಚಾಮರಾಜನಗರ ಶಾಸಕರಾದ, ಪುಟ್ಟರಂಗ ಶೆಟ್ಟಿ ಹಾಗೂ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು ಚಂದ್ರು ಯಳಂದೂರು ಪಟ್ಟಣ ಪಂಚಾಯಿತಿಯ ಸದ್ಯಸರದ ರಂಗನಾಥ, ಮಹೇಶ್, ಹಾಗೂ ಶ್ರೀಮತಿ ಮೀನಾ ಗೋವಿಂದ್ ರಾಜು ಗುಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗುಂಬಳ್ಳಿಯ ಗ್ರಾಮ ಪಂಚಾಯಿತಿ ಸದ್ಯಸರುಗಳು, ಉಪ್ಪಿನಮೊಳೆಯ ಯಜಮಾನ್ರು ಯುವಕರು, ಗ್ರಾಮಸ್ಥರು ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳು ಹಾಜರಿದ್ದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!