
ನಿಧಿ ಅಗರವಾಲ್ ಭಾರತದ ಖ್ಯಾತ ನಟಿ. ಹಿಂದಿ, ತೆಲುಗು, ತಮಿಳು ಚಿತ್ರದಲ್ಲಿ ನಟಿಸಿದ್ದಾರೆ.
ನೀಳಕಾಯದ ಅಂದದ ಚೆಲುವೆಗೆ ಡ್ರೆಸಿಂಗ್ ಮೇಲೆ ಅಪಾರ ಪ್ರೀತಿ. ಇವರ ವಸ್ತ್ರ ವಿನ್ಯಾಸಕ್ಕೆ ಮನಸೋಲದವರಿಲ್ಲ.

ಇವರು ವಿವಿಧ ಶೈಲಿಯ ಡ್ರೆಸಿಂಗ್ ನಿಂದ ಸದಾ ಮಿಂಚುತ್ತಿರುತ್ತಾರೆ. ಇವರು ವಿವಿಧ ಶೈಲಿಯ ಸಾರಿಗಳನ್ನು ಉಡುವುದರಲ್ಲಿ ಹಾಗೂ ಆಭರಣಗಳ ವಿನ್ಯಾಸದಲ್ಲೂ ಎತ್ತಿದ ಕೈ. ಹೇಳಿ ಕೇಳಿ ಸೌಂದರ್ಯವನ್ನು ತನ್ನಲ್ಲೇ ಹುದುಗಿಸಿಕೊಂಡವರಂತೆ ಕಂಡು ಬರುವ ಬಳುಕುವ ಬಳ್ಳಿಗೆ ಯಾವುದೇ ವಿನ್ಯಾಸದ ವಸ್ತ್ರಗಳು, ಡ್ರೆಸಿಂಗ್ ಗಳು ಅಂದವಾಗಿಯೇ ಕಾಣುತ್ತವೆ.





