Ad imageAd image

ಕನ್ನಡ ಸಾಹಿತ್ಯ ಪರಿಷತ್ತು ಸೇಡಂ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಲಿಂಗರೆಡ್ಡಿ ಶೇರಿ ಆಯ್ಕೆ.

Bharath Vaibhav
ಕನ್ನಡ ಸಾಹಿತ್ಯ ಪರಿಷತ್ತು ಸೇಡಂ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಲಿಂಗರೆಡ್ಡಿ ಶೇರಿ ಆಯ್ಕೆ.
WhatsApp Group Join Now
Telegram Group Join Now

ಸೇಡಂ:- ಡಿಸೆಂಬರ್ ೨ ರಂದು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲು, ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷರ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು.

ಸಮ್ಮೇಳನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸೇಡಂನ ಪ್ರಸಿದ್ಧ ಸಾಹಿತಿಗಳಾದ ಲಿಂಗಾರೆಡ್ಡಿ ಶೇರಿ, ಧನಶೆಟ್ಟಿ ಸಕ್ರಿ, ಬನ್ನಪ್ಪ ಕುಂಬಾರ್, ಮಹಿಪಾಲ ರೆಡ್ಡಿ ಮುನ್ನೂರ ಹಾಗೂ ಜಗನ್ನಾಥ್ ತರನಳ್ಳಿ ರವರ ಹೆಸರನ್ನು ಸೂಚಿಸಿದ್ದು, ಚರ್ಚೆ ನಡೆಸಲಾಯಿತು.
ಅಂತಿಮವಾಗಿ ಹಿರಿಯ ಸಾಹಿತಿಗಳು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಕೃಷಿಯನ್ನು ಗೈದು ಸುಮಾರು ೨೦ಕ್ಕೂ ಹೆಚ್ಚು ವಿಭಿನ್ನ ಕವನ ಸಂಕಲನ, ಕಥಾ ಸಂಕಲನ ರಚಿಸಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನ ಮೂಡಿಸಿರುವ ಲಿಂಗಾರೆಡ್ಡಿ ಶೇರಿ ಅವರನ್ನು ಎಲ್ಲಾರ ಒಪ್ಪಿಗೆ ಮೇರೆಗೆ ಅನುಮೋದನೆಯನ್ನು ಸೂಚಿಸಿ ಮಾನ್ಯರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸುಮಾ ಎಲ್. ಚಿಮ್ಮನಚೋಡಕರ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಸೇಡಂ, ಪ್ರಕಾಶ್ ಗೊಣಗಿ, ರಮೇಶ್ ರಾಠೋಡ್ ಗೌರವ ಕಾರ್ಯದರ್ಶಿಗಳು ಕಸಾಪ ಸೇಡಂ, ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು, ಪದವಿ ಪೂರ್ವ ಪ್ರಾಂಶುಪಾಲರಾದ, ಡಾ.ಪಂಡಿತ್ ಬಿ.ಕೆ, ಸರ್ಕಾರಿ ನೌಕರ ಸಂಘದ ನೂತನ ಅಧ್ಯಕ್ಷರಾದ ಅರವಿಂದ್ ಪಸಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಸಾಗರ್, ಕ ಸಾ ಪ ಪದಾಧಿಕಾರಿಗಳಾದ ಈರಮ್ಮ ಪಾಟೀಲ್ ಯಡ್ಡಳ್ಳಿ, ರಾಚಣ್ಣ ಬಳಗಾರ, ಸಂದೀಪ್ ಪಾಟೀಲ್, ಜನಾರ್ಧನ್ ರೆಡ್ಡಿ ತುಳೇರ್, ನದೀಮ್ ಪಟೇಲ್ , ಲಕ್ಷ್ಮಣ್ ರಂಜೋಕರ್ ಇತರರು ಭಾಗವಹಿಸಿದ್ದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!