ಮುತ್ನಾಳ : ಹೌದು ಬೆಳಗಾವಿ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರಗಳಲ್ಲಿ ಒಂದಾದ ಕೇದಾರ ಪೀಠದ ಶಾಖಾ ಮಠವಾದ ಮುತ್ನಾಳ ಗ್ರಾಮದಲ್ಲಿ ಪೂಜ್ಯ ಕೇದಾರ ಪೀಠದ ಜಗದ್ಗುರು ಗಳು ಆದ ಶ್ರೀ ಶ್ರೀ ಭೀಮಾಶಂಕರ ಲಿಂಗ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಹಾಗೂ ರಂಬಾಪುರಿ ಪೀಠದ ಜಗದ್ಗುರುಗಳು ಆದ ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಗಳ ಅಮೃತ ಹಸ್ತದಿಂದ ಪೂಜ್ಯ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಶಿರಕೊಳ ಮಠದ ಗುರುಸಿದ್ದ ಶಿವಾಚಾರ್ಯರು,ಚಂದ್ರಶೇಖರ್ ಶಿವಾಚಾರ್ಯರು, ಕಣಕುಪ್ಪೆ ಶ್ರೀಗಳು, ಸಂಗೊಳ್ಳಿ ಶ್ರೀಗಳು,ಅರಳಿಕಟ್ಟಿ ಶ್ರೀಗಳು, ಕಾರಂಜಿ ಮಠದ ಶ್ರೀಗಳು, ದೊಡ್ಡವಾಡ ಶ್ರೀಗಳು, ಬಡಿಕೊಳ್ಳ ಮಠ ಹಾಗೂ ಮಾಡಿವಾಲೇಶ್ವರ ಶ್ರೀಗಳ ಸಮ್ಮುಖದಲ್ಲಿ ಲಿಂಗೈಕ್ಯ ಜಗದ್ಗುರು ಶಾಂತಲಿಂಗ ಶಿವಾಚಾರ್ಯರು ಸ್ವಾಮೀಜಿ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಇದರ ನಿಮಿತ್ಯ ನಿನ್ನೆಯಿಂದ ಇಂದಿನವರೆಗೆ ಸಾಕಷ್ಟು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಐತಿಹಾಸಿಕ ಮುತ್ನಾಳ ಕ್ಷೇತ್ರದಲ್ಲಿ ನಡೆದವು, ಈ ಸಂದರ್ಭದಲ್ಲಿ ರಂಬಾಪೂರಿ ಹಾಗೂ ಕೇದಾರ ಜಗದ್ಗುರು ಗಳಿಗೆ ಪಾದಪೂಜೆಯನ್ನು ಮಾಡಲಾಯಿತು, ಮುತ್ನಾಳ ಹಾಗೂ ಬೆಟಸುರ ಮಠಗಳ ಪೀಠಾಧ್ಯಕ್ಷರು ಆದ ಶಿವಾನಂದ ಶಿವಾಚಾರ್ಯರ ಕಾರ್ಯಗಳನ್ನು ಇಬ್ಬರು ಜಗದ್ಗುರುಗಳು ಶ್ಲಾಘನೆ ವ್ಯಕ್ತಪಡಿಸಿದರು, ಸುಮಾರು 5 ಸಾವಿರಕ್ಕೂ ಹೆಚ್ಚುಜನ ಭಕ್ತಾದಿಗಳು ಭಾಗವಹಿಸಿದ್ದರು, ಎಲ್ಲಾ ಗಣ್ಯರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಚಿವೆ ಲಕ್ಸ್ಮಿ ಹೆಬ್ಬಾಳ್ಕರ್, ಮಹಾಂತೇಶ್ ಕವಟಗಿಮಠ, ಜಗದೀಶ್ ಶೆಟ್ಟರ್ , ಮೋಹನ್ ಅಂಗಡಿ, ಪತ್ರಕರ್ತ ಬಸವರಾಜು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಬಗ್ಗೆ ನಮ್ಮ ನ್ಯೂಸ್ ಸಮೂಹದೊಂದಿಗೆ ರಂಬಾಪೂರಿ ಜಗದ್ಗುರುಗಳು ಮಾತನಾಡಿದರು.
ಎಲ್ಲಾ ಬಂದ ಭಕ್ತಾದಿಗಳಿಗೆ ಅನ್ನ ದಾಸೋಹವನ್ನು ಏರ್ಪಡಿಸಲಾಗಿತ್ತು. ಮುತ್ನಾಳ ಗ್ರಾಮದ ಹಿರಿಯರು, ಹಾಗೂ ಸರ್ವ ಜನತೆ ಬಾರಿ ಉತ್ಸಾಹದಿಂದ ಪಾಲ್ಗೊಂಡು ನಿರ್ವಹಣೆ ಮಾಡಿದರು, ಒಟ್ಟಾರೆ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆದು ಸಂಪನ್ನ ಗೊಂಡಿತು.
ವರದಿ : ಬಸವರಾಜು