Ad imageAd image

ಲಿಂಗಾಯತ ಬಣಜಿಗರು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನುಗ್ಗುವ ಪ್ರವೃತ್ತಿ ರೂಢಿಸಿಕೊಳ್ಳಬೇಕಾಗಿದೆ: ಸಿ.ಸಿ ಚಂದ್ರಾಪಟ್ಟಣ

Bharath Vaibhav
ಲಿಂಗಾಯತ ಬಣಜಿಗರು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನುಗ್ಗುವ ಪ್ರವೃತ್ತಿ ರೂಢಿಸಿಕೊಳ್ಳಬೇಕಾಗಿದೆ: ಸಿ.ಸಿ ಚಂದ್ರಾಪಟ್ಟಣ
WhatsApp Group Join Now
Telegram Group Join Now

ಇಲಕಲ್ಲ : ಎಲ್ಲರನ್ನು ಪ್ರೀತಿಸುವ ಮತ್ತು ಎಲ್ಲರ ಗೌರವಕ್ಕೆ ಪಾತ್ರರಾಗಿರುವ ಲಿಂಗಾಯತ ಬಣಜಿಗರು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನುಗ್ಗುವ ಪ್ರವೃತ್ತಿ ರೂಢಿಸಿಕೊಳ್ಳಬೇಕಾಗಿದೆ ಎಂದು ಹಿರಿಯರಾದ ಸಿ.ಸಿ ಚಂದ್ರಾಪಟ್ಟಣ ಹೇಳಿದರು ಅವರು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಜಯಮಹಾಂತೇಶ ಬಡಾವಣೆಯ ನೂತನ ಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವಾ ನಿವೃತ್ತರಾದ ಹಾಗೂ ಇಳಕಲ್ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ನಿರ್ದೆಶಕರಿಗೆ ಹಮ್ಮಿಕೊಂಡ ಗೌರವ ಸನ್ಮಾನ ಸಮಾರಂಭವನ್ನು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಉದ್ಘಾಟಿಸಿ ಮಾತನಾಡಿ ಬುದ್ದಿವಂತ ಸಮಾಜ ಎನಿಸಿಕೊಂಡವರು ಯಾವುದೇ ಕ್ಷೇತ್ರದಲ್ಲಿ ಪಾರದರ್ಶಕತೆಯಿಂದ ಕೆಲಸ ಮಾಡಿ ಸಮಾಜಕ್ಕೆ ಹೆಮ್ಮೆ ತರುವಂತೆ ಮಾಡಿರಿ ಎಂದು ಹೇಳಿದರು.
ವಾಣಿಜ್ಯೋಧ್ಯಮಿ ಗುರಣ್ಣ ಮರಟದ ಮಾತನಾಡಿ ಮಕ್ಕಳ ಶಿಕ್ಷಣಕ್ಕೆ ಆಧ್ಯತೆ ನೀಡಬೇಕು ವ್ಯಾಪರ ಇಂದು ಸ್ಪರ್ಧೆಯ ಸಂಕಷ್ಟದಲ್ಲಿರುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಬ್ಯಾಕ್ ನಿರ್ದೆಶಕ ಮಹಾಂತೇಶ ಅಂಗಡಿ ಮಾತನಾಡಿ ನಮ್ಮ ಬ್ಯಾಂಕಿನಲ್ಲಿ ಯಾವುದೇ ಅಕ್ರಮಗಳು, ಲಪಡಾಗಳು ಆಗಲು ಸಾಧ್ಯವೆ ಇಲ್ಲ ಸಿಬ್ಬಂದಿಯ ಪ್ರಾಮಾಣಿಕ ದಕ್ಷತೆಯೇ ಬ್ಯಾಂಕಿನ ಆಧಾರ ಸ್ತಂಭ ಎಂದು ಹೇಳಿದರು.
ಗೌರವ ಸನ್ಮಾನ ಸ್ವೀಕರಿಸಿದ ಇಳಕಲ್ ಕೋ-ಆಪರೇಟಿವ್ ಬ್ಯಾಂಕ ನಿರ್ದೆಶಕರಾದ ಡಾ.ಅರುಣಾ ಅಕ್ಕಿ, ಮಹಾಂತೇಶ ಅಂಗಡಿ, ಮಂಜುನಾಥ ಶೆಟ್ಟರ ಮಾತನಾಡಿದರು.
ಇದೆ ಸಂದರ್ಭದಲ್ಲಿ ಎಸ್.ವಿ.ಎಂ ಸಂಘದ ನಿರ್ದೆಶಕ ಮಲ್ಲಣ್ಣ ಹರವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೆಶಕ ಮಹಾಂತೇಶ ಹಲಕುರ್ಕಿ, ನಿವೃತ್ತ ಉಪನ್ಯಾಸಕ ಮಹಾಂತೇಶ ಅರಳಿ, ಪಂಚಾಕ್ಷರಿ ಅಂಗಡಿ, ಅಶೋಕ ನೀರಲಕೇರಿ, ಸುರೇಶ ಅಂಗಡಿ, ಈರಣ್ಣ ನಂದಾಪೂರ, ನಿವೃತ್ತ ಉಪನ್ಯಾಸಕಿ ದ್ರಾಕ್ಷಾಯಿಣಿ ಗಡಾದ, ನಾಗರತ್ನಾ ಕಾಚಟ್ಟಿಯವರ, ಸವಿತಾ ಮಾಟೂರ, ಮಹಾದೇವಿ ತೊಂತನಾಳ, ಡಾ.ಬಸವರಾಜ ಅಂಗಡಿ, ಅಶೋಕ ವಾಲಿ ಹಾಗೂ ರೇವಣಸಿದ್ದಪ್ಪ ಮತ್ತು ಜಯಶ್ರೀ ದಂಪತಿಗಳನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂಗಣ್ಣ ಎಮ್ಮಿ ಪರಿವಾರದವರು ಹಾಗೂ ಎ.ಸ್.ಆರ್.ಕಂಠಿ ವೇದಿಕೆಯ ಸದಸ್ಯರೂ ಸಾಧಕ ಮಹನೀಯರಿಗೆ ಸನ್ಮಾನ ನೆರವೇರಿಸಿದರು.
ವಿ.ಎಸ್.ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಬಣಜಿಗ ಕ್ಷೇಮಾಭಿವೃದ್ದಿ ಸಂಘದ ನಗರ ಘಟಕದ ಅಧ್ಯಕ್ಷ ಗಂಗಾಧರ ಶೆಟ್ಟರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುರುಗೇಶ ಪಾಟೀಲ, ಗುರುಬಸಪ್ಪ ಕೋಟಿ, ಪರುತಪ್ಪಗೌಡ ಪಟ್ಟಣಶೆಟ್ಟಿ, ಬಸಪ್ಪ ಅಂಗಡಿ, ಈರಣ್ಣ ಕರಡಿ, ಶಿವರುದ್ರಪ್ಪ ಗೊಂಗಡಶೆಟ್ಟಿ, ಮಹಾಂತಪ್ಪ ವಾಲಿ, ಡಾ. ಮಹಾಂತೇಶ ಅಕ್ಕಿ, ಸಂಗಮೇಶ ಪಟ್ಟಣಶೆಟ್ಟಿ, ಗುರುಬಸಪ್ಪ ತುಪ್ಪದ, ವೀರಣ್ಣ ಅಂಗಡಿ, ಗಂಗಾಧರ ಅಂಗಡಿ, ಶಿವಕುಮಾರ ಅಕ್ಕಿ, ಪ್ರಭು ಪಟ್ಟಣಶೆಟ್ಟಿ, ಪರಪ್ಪ ಕವಲಿ, ಬಸವರಾಜ ಗುಗ್ಗರಿ, ಅಡಿವೆಪ್ಪ ಅಂಗಡಿ, ಈರಪ್ಪ ಗೋನಾಳ ಮಲ್ಲಪ್ಪ ಅಂಗಡಿ, ಬಸವರಾಜ ಪಟ್ಟಣಶೆಟ್ಟಿ, ಮಲ್ಲು ನಿರಲಕೇರಿ, ಸಿದ್ದು ಅಂಗಡಿ, ಗಂಗಮ್ಮ ಎಮ್ಮಿ, ಕವಿತಾ ಬೆಲ್ಲದ, ಇಂದುಮತಿ ಅಂಗಡಿ, ಸುನಿತಾ ಅಂಗಡಿ, ವಿಜಯಲಕ್ಷಿö್ಮ ಕಂಠಿ ಮತ್ತಿತರಿದ್ದರು.
ಕುಮಾರಿ ಸುಜಾತ ಅಂಗಡಿ ಮಹಾದೇವಿ ಬಾದಿಮನಾಳ ಪ್ರಾರ್ಥಿಸಿದರು, ನಿವೇದಿತಾ ಅಂಗಡಿ ವಚನ ಹಾಡಿದರು, ವಿ.ಬಿ.ಜೀರಗಿ ಸ್ವಾಗತಿಸಿದರು, ಚನ್ನಬಸಪ್ಪ ಲೆಕ್ಕಿಹಾಳ ನಿರೂಪಿಸಿದರು, ಮಂಜು ಅಂಗಡಿ ವಂದಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!