ಬೆಂಗಳೂರು : 2025-26ನೇ ಸಾಲಿನ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, RTE ಅಡಿಯಲ್ಲಿ ಸೀಟು ಪಡೆಯಲು ಉತ್ಸುಕರಾಗಿರುವ ಪೋಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಕರ್ನಾಟಕ ರಾಜ್ಯದಾದ್ಯಂತ ಖಾಸಗಿ ಶಾಲೆಗಳು, ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಉಚಿತವಾಗಿ ಎಲ್‌ಕೆಜಿ / 1ನೇ ತರಗತಿಗೆ ಪ್ರವೇಶಾತಿ ಪಡೆಯುವ ಸಂಬಂಧ, ಇದೀಗ ಆನ್‌ಲೈನ್ ಅರ್ಜಿ ಲಿಂಕ್ ಅನ್ನು ಬಿಡುಗಡೆ ಮಾಡಿದೆ.
ಪೋಷಕರು, ತಮ್ಮ ಮಕ್ಕಳ ಪರವಾಗಿ ಆರ್‌ಟಿಇ ಶಿಕ್ಷಣ ಪ್ರವೇಶಕ್ಕೆ ಇಂದಿನಿಂದ ಮೇ 12 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆರ್‌ಟಿಇ ಅಡಿ ಖಾಸಗಿ ಶಾಲೆಯಲ್ಲಿ ಉಚಿತ ಸೀಟಿಗಾಗಿ ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ ಇಂತಿದೆ :
http://www.schooleducation.kar.nic.in
ಅರ್ಜಿ ಸಲ್ಲಿಕೆಗೆ ವಿದ್ಯಾರ್ಥಿ, ತಂದೆ, ತಾಯಿ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿದೆ.