Ad imageAd image

30 ಸಾವಿರ ಮಂದಿ ದೃಷ್ಟಿ ನೀಡಿದ ಹೆಮ್ಮೆಯ ಸಂಸ್ಥೆ ಲಯನ್ಸ್ : ಎಂ.ಡಿ. ಲಕ್ಷ್ಮೀನಾರಾಯಣ ಶ್ಲಾಘನೆ

Bharath Vaibhav
30 ಸಾವಿರ ಮಂದಿ ದೃಷ್ಟಿ ನೀಡಿದ ಹೆಮ್ಮೆಯ ಸಂಸ್ಥೆ ಲಯನ್ಸ್ : ಎಂ.ಡಿ. ಲಕ್ಷ್ಮೀನಾರಾಯಣ ಶ್ಲಾಘನೆ
WhatsApp Group Join Now
Telegram Group Join Now

ತುರುವೇಕೆರೆ: ಕಳೆದ ಮೂರು ದಶಕದಲ್ಲಿ ತಾಲ್ಲೂಕಿನ ಸುಮಾರು 30ಸಾವಿರಕ್ಕೂ ಅಧಿಕ ಮಂದಿಗೆ ದೃಷ್ಟಿ ನೀಡಿದ ಏಕೈಕ ಸಂಸ್ಥೆ ಲಯನ್ಸ್ ಕ್ಲಬ್ ನ ಸಾಧನೆ ಶ್ಲಾಘನೀಯ ಎಂದು ಮಾಜಿ ಶಾಸಕ, ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ತಿಳಿಸಿದರು.

ಪಟ್ಟಣದ ಜಿಜೆಸಿ ಕಾಲೇಜು ಆವರಣದಲ್ಲಿ ಲಯನ್ಸ್ ಕ್ಲಬ್, ಲಯನ್ಸ್ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಹ್ಯಾಪಿ ಹೆಲ್ತ್ ಹಾಸ್ಪಿಟಲ್, ಶ್ರದ್ಧಾ ಐ ಕೇರ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮಾಜಿ ಪ್ರಧಾನರಾದ ಟಿ.ಎಸ್. ಮಲ್ಲೇಶ್ ಸ್ಮರಣಾರ್ಥ ಆಯೋಜಿಸಿದ್ದ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, 35 ವರ್ಷಗಳ ಹಿಂದೆ ಪ್ರಾರಂಭವಾದ ಸಂಸ್ಥೆ ಇಂದು ತಾಲೂಕಿನ ಪ್ರತಿ ಹಳ್ಳಿಗೂ ತನ್ನ ಸೇವೆಯನ್ನು ನೀಡಿ ಮನೆಮಾತಾಗಿದೆ. ಆರೋಗ್ಯ ಶಿಬಿರ, ಕಣ್ಣಿನ ತಪಾಸಣೆ ಮಾತ್ರವಲ್ಲದೆ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಸೇರಿದಂತೆ ಸಮಾಜದ ಎಲ್ಲ ಸ್ತರದ ಅಶಕ್ತರಿಗೆ, ಕೂಲಿಕಾರ್ಮಿಕರಿಗೆ ನಿಸ್ವಾರ್ಥ ಸೇವಾ ಮನೋಭಾವದಿಂದ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.

ಪ್ರಸ್ತುತ ಕಾಲಘಟ್ಟದಲ್ಲಿ ಆರೋಗ್ಯ ಬಹಳ ಮುಖ್ಯವಾಗಿದೆ. ಹಣ, ಸಂಪತ್ತು, ಅಧಿಕಾರ ಎಷ್ಟೇ ಇದ್ದರೂ ಆರೋಗ್ಯ ಇಲ್ಲದಿದ್ದರೆ ಪ್ರಯೋಜನವಿಲ್ಲ. ಹಣದಿಂದ ಆರೋಗ್ಯ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಈ ನಿಟ್ಟಿನಲ್ಲಿ ಮನೆಬಾಗಿಲಿನಲ್ಲಿ ಆರೋಗ್ಯ ಚಿಕಿತ್ಸೆ, ವೈದ್ಯಕೀಯ ತಪಾಸಣೆ ದೊರಕುವ ಅವಕಾಶವನ್ನು ಲಯನ್ಸ್ ಹಾಗೂ ಹ್ಯಾಪಿ ಹೆಲ್ತ್ ಹಾಸ್ಪಿಟಲ್ ಕಲ್ಪಿಸಿದ್ದು ನಾಗರೀಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ತಾಲೂಕಿನ ಹೆಣ್ಣು ಮಗಳು ಡಾ.ಜ್ಯೋತಿನಾಗರಾಜಯ್ಯ ಅವರು ಬೆಂಗಳೂರಿನಲ್ಲಿ ದೊಡ್ಡ ಆಸ್ಪತ್ರೆ ನಿರ್ಮಿಸಿ ಸಹಸ್ರಾರು ಜನರಿಗೆ ಚಿಕಿತ್ಸೆ ನೀಡುತ್ತಾ ಉತ್ತಮ ಹೆಸರು ಗಳಿಸಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದ ಅವರು, ನಗರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದು ಬಹಳ ಕಷ್ಟಕರವಾಗಿರುವ ಸಂದರ್ಭದಲ್ಲಿ ತಾನು ಹುಟ್ಟಿದ ಊರಿಗೆ, ಜನತೆಗೆ ಸೇವೆ ಸಲ್ಲಿಸಬೇಕೆಂಬ ಆಶಯದಿಂದ ತನ್ನ ಆಸ್ಪತ್ರೆಯ ತಂಡದೊಂದಿಗೆ ಜ್ಯೋತಿನಾಗರಾಜಯ್ಯ ದಂಪತಿಗಳು ಬಂದಿದ್ದಾರೆ. ಅವರ ಆಶಯ ಈಡೇರುವ ಜೊತೆಗೆ ತಾಲ್ಲೂಕಿಗೆ ಇನ್ನೂ ಹೆಚ್ಚಿನ ಸೇವೆ ದೊರಕುವಂತಾಗಲಿ ಎಂದರು.

ಹ್ಯಾಪಿ ಹೆಲ್ತ್ ಹಾಸ್ಪಿಟಲ್ ನ ಮುಖ್ಯಸ್ಥ, ಯೂರಾಲಜಿ ತಜ್ಞ ಡಾ.ನಾಗರಾಜಯ್ಯ ಮಾತನಾಡಿ, ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಅಲ್ಲಿನ ಜನರ ಕಷ್ಟದ ಅರಿವಿದೆ. ಗ್ರಾಮೀಣ ಜನತೆ ನಗರಕ್ಕೆ ಬಂದು ದೊಡ್ಡ ಮಟ್ಟದ ಚಿಕಿತ್ಸೆ ಪಡೆಯುವುದು ಕಷ್ಟಸಾಧ್ಯ. ಈ‌ ಹಿನ್ನೆಲೆಯಲ್ಲಿ ಹಳ್ಳಿಯ ಜನರ ಬಳಿಗೇ ತೆರಳಿ ಅವರಿಗೆ ವೈದ್ಯಕೀಯ ಸೇವೆ ಸಲ್ಲಿಸಬೇಕೆಂಬ ಆಶಯ ಬಹಳಷ್ಟಿತ್ತು. ಅದು ಇಂದು ಲಯನ್ಸ್ ಮೂಲಕ ನೆರವೇರಿದೆ ಎಂದರು.

ಲಯನ್ಸ್ ಅಧ್ಯಕ್ಷ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್, ಹ್ಯಾಪಿ ಹೆಲ್ತ್ ಹಾಸ್ಪಿಟಲ್ ನ ಡಾ.ಜ್ಯೋತಿನಾಗರಾಜಯ್ಯ ದಂಪತಿಗಳನ್ನು ಸನ್ಮಾನಿಸಲಾಯಿತು. ತುರುವೇಕೆರೆಯಲ್ಲಿ ನಿರ್ಮಾಣವಾಗುತ್ತಿರುವ ಲಯನ್ಸ್ ಭವನಕ್ಕೆ ಡಾ.ಜ್ಯೋತಿನಾಗರಾಜಯ್ಯ ಕುಟುಂಬ 25 ಸಾವಿರ ರೂಗಳ ಧನಸಹಾಯ ನೀಡಿತು.

ಸಮಾರಂಭದಲ್ಲಿ ನೂರಾರು ಮಂದಿ ಯೂರಾಲಜಿ, ಕಿಡ್ನಿ, ಕಣ್ಣು ಹಾಗೂ ಆರೋಗ್ಯ ತಪಾಸಣೆ ಮಾಟಿಸಿಕೊಂಡರು. ಹ್ಯಾಪಿ ಹೆಲ್ತ್ ಹಾಸ್ಪಿಟಲ್ ವೈದ್ಯರಾದ ಡಾ.ಶಾರದಾ, ಡಾ.ಹನುಮೇಶ್, ಡಾ.ನಿಶಾಂತ್, ಲಯನ್ಸ್ ವಲಯಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಸುರೇಶ್, ಖಜಾಂಚಿ ರಾಮಕೃಷ್ಣ, ಉದ್ಯಮಿ ಎಂ.ಡಿ. ಮೂರ್ತಿ, ಪದಾಧಿಕಾರಿಗಳಾದ ಡಾ.ನಾಗರಾಜ್, ಡಾ.ಚೌದ್ರಿ ನಾಗೇಶ್, ಡಾ. ಹರ್ಷಿತ್, ಡಾ.ಪ್ರೀತಂ, ಗಂಗಾಧರ ದೇವರಮನೆ, ಸುನಿಲ್ ಬಾಬು, ಟಿಎವಿ ಗುಪ್ತ, ತಿಲಕ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಧನಪಾಲ್, ಕಾಲೇಜಿನ ಉಪಪ್ರಾಂಶುಪಾಲ ವೆಂಕಟೇಶ್, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್, ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಯಶೋಧರ್ ಮುಂತಾದವರಿದ್ದರು.

 

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!