——————————-ಸಂಬಂಧಿಸಿದ ಅಳ್ನಾವರ ಕಚೇರಿ ಅಧಿಕಾರಿಗಳು ಗಮನ ಹರಿಸಿಲ್ಲವೇ?
ಅಳ್ನವಾರ: ಧಾರವಾಡ ಜಿಲ್ಲೆಯ ಅಳ್ನವಾರ ಪಟ್ಟಣದ ವ್ಯಾಪ್ತಿಯಲ್ಲಿ ನಿರ್ಮಾಣ ವಾಗಿರುವ ಉಪ ತಹಶೀಲ್ದಾರ್ ಕಚೇರಿಯ ಆವರಣ ಹಾಗೂ ಸುತ್ತಮುತ್ತಲಿನಲ್ಲಿ ಖಾಲಿ ಕುಡಿದು ಬಿಸಾಡಿದ ಬೀರ್ ಬಾಟಲಿಗಳ ದರ್ಬಾರ್ ತುಂಬಾನೇ ಜಾಸ್ತಿಯಾಗಿದ್ದು, ರಾತ್ರಿವೇಳೆ ಕುಡುಕರ ಹಾಟ್ ಪ್ಲೇಸ್ ಆಗಿ ಮಾರ್ಪಟ್ಟಿದೆ.

ಇನ್ನೂ ಇಲ್ಲಿಗೆ ದಿನನಿತ್ಯ ವಿವಿಧ ಕೆಲಸಗಳಿಗೆ ಬರುವ ಸಾರ್ವಜನಿಕರು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಸೇರಿದಂತೆ ಪ್ರತಿಯೊಬ್ಬರಿಗೂ ತುಂಬಾನೇ ಕಿರಿ ಕಿರಿಯಾಗುತ್ತಿದೆ. ಇನ್ನೊಂದು ಕಡೆ ಈ ಉಪ ತಹಶೀಲ್ದಾರ್ ಕಚೇರಿ ಕಟ್ಟಡವನ್ನು ನೂತನವಾಗಿ ನಿರ್ಮಿಸಿದ್ದು, ಉದ್ಘಾಟನೆ ಬಾಗ್ಯ ಕಾಣದೇ ಈಗಾಗಲೇ ಕಚೇರಿ ಓಪನ್ ಮಾಡಿಕೊಂಡು ಕೆಲಸ ಮಾಡ್ತಾ ಇದ್ದು. ಇಲ್ಲಿ ದುರ್ವಾಸನೆಯೇ ಜಾಸ್ತಿಯಾಗಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಕಂದಾಯ ಇಲಾಖೆ ಸಚಿವರ ಆಪ್ತ ಸಹಾಯಕರು ಹಾಗೂ ಅಳ್ನವಾರ ತಾಲ್ಲೂಕಿನ ತಹಶೀಲ್ದಾರ್ ಬಸವರಾಜು ಬೆಣ್ಣಿ ಶಿರೂರು ಅವರಿಗೆ ಕರೆ ಮಾಡಿ ಈ ಸಮಸ್ಯೆ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಈ ಅಳ್ನವಾರ ಉಪ ತಹಶೀಲ್ದಾರ್ ಕಚೇರಿ ಆವರಣಕ್ಕೆ ಖಾಲಿ ಬೀರ್ ಮದ್ಯದ ಬಾಟೆಲ್ಲು ಗಳ ದರ್ಬಾರ್ ನಿಂದ ಮುಕ್ತಿ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಬಸವರಾಜು




