ಚಿಕ್ಕೋಡಿ :- ಎಂ ಎಸ್ ಐ ಎಲ್ ಮಾರುಕಟ್ಟೆಯಲ್ಲಿ ರಾಜಾರೋಷವಾಗಿ ಮದ್ಯವನ್ನು ನಿಗದಿಗಿಂತ ಹೆಚ್ಚು ಬೆಲೆಗೆ ಮಾರುತ್ತಿದ್ದರೂ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ. ಇಷ್ಟೊಂದು ಬೆಲೆನಾ ಎಂದು ಕೇಳಿದರೆ ಬೇಕಿದ್ದರೆ ತಗೊಳ್ಳಿ, ಇಲ್ಲವೆಂದರೆ ಬಿಡಿ, ದೂರು ಕೋಡೋದಾದ್ರೆ ಕೊಡಿ ಎಂದು ಮದ್ಯ ಮಾರಾಟಗಾರರು ಗ್ರಾಹಕರಿಗೆ ದಬಾಯಿಸುತ್ತಿದ್ದಾರೆ ಎನ್ನಲಾಗಿದೆ.
ಎಂ ಎಸ್ ಆಯ ಎಲ್ ಮದ್ಯದ ಅಂಗಡಿ ಹೆಸರಿಗೆ ಮಾತ್ರ ಎಂಆರ್‌ಪಿ ಬೆಲೆ
ಮಾರಾಟ ದರಕ್ಕಿಂತಾ ಹೆಚ್ಚಿನ ಬೆಲೆಗೆ ಮದ್ಯ ಸೇಲ್.
ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರುತ್ತಿದ್ದು, ಮದ್ಯ ಪ್ರಿಯರಿಗೆ ನುಂಗಲಾರದ ತುತ್ತಾಗಿದೆ.
ಗ್ರಾಹಕರು ದುಬಾರಿ ಬೆಲೆ ತೆತ್ತು ಮದ್ಯ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ.
ಹೆಚ್ಚಿನ ದರಕ್ಕೆ ಮದ್ಯ ನಗರ ಮಾತ್ರವಲ್ಲದೇ ಅವಳಿ ಜಿಲ್ಲೆಯ ತಾಲೂಕುಗಳ ನಗರ, ಹೋಬಳಿಗಳ ಮದ್ಯದ ಅಂಗಡಿಗಳಲ್ಲಿ ಮದ್ಯ ಬಾಟಲಿಗಳ ಮೇಲೆ ದರ ನಮೂದಾಗಿದ್ದರೂ ಆಯಾ ಬ್ರಾಂಡ್‌ಗೆ ತಕ್ಕಂತೆ 5 ರೂಪಾಯಿ ಗಳಿಂದ 20 ರೂಪಾಯಿ ಗಳಿಗಿಂತಲೂ ಹೆಚ್ಚಿಗೆ ಹಣ ಪಡೆಯಲಾಗುತ್ತಿದ್ದು, ಮದ್ಯದ ಅಂಗಡಿಗಳ ಮೇಲೆ ಕ್ರಮ ಯಾವಾಗ ಎಂಬ ಪ್ರಶ್ನೆಗಳು ಮೇಲೆದ್ದಿವೆ.
ಹೆಚ್ಚು ಮಾರಾಟವಾಗುವ ಬಿಯರ ಮದ್ಯಗಳಿಗೆ 20 ರೂಪಾಯಿ ನಿಂದ 40 ರೂಪಾಯಿ ವರೆಗೆ ಹೆಚ್ಚಿನ ಬೆಲೆಗೆ ಮಾರುತ್ತಾರೆ. ಇತರೆ ಮದ್ಯ ಬಾಟಲಿಗಳನ್ನು ಆಯಾ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಲಾಗುತ್ತಿದೆ.
ಗ್ರಾಹಕರಿಗೆ ದಬಾವಣೆ ಮಾರುಕಟ್ಟೆಯಲ್ಲಿ ರಾಜಾರೋಷವಾಗಿ ಮದ್ಯವನ್ನು ನಿಗದಿಗಿಂತ ಹೆಚ್ಚು ಬೆಲೆಗೆ ಮಾರುತ್ತಿದ್ದರೂ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ. ಇಷ್ಟೊಂದು ಬೆಲೆನಾ ಎಂದು ಕೇಳಿದರೆ ಬೇಕಿದ್ದರೆ ತಗೊಳ್ಳಿ, ಇಲ್ಲವೆಂದರೆ ಬಿಡಿ, ದೂರು ಕೋಡೋದಾದ್ರೆ ಕೊಡಿ ಎಂದು ಮದ್ಯ ಮಾರಾಟಗಾರರು ಗ್ರಾಹಕರಿಗೆ ದಬಾಯಿಸುತ್ತಿದ್ದಾರೆ ಎನ್ನಲಾಗಿದೆ.
ಮಾಮೂಲಿ ಮದ್ಯದ ಅಂಗಡಿಗಳಲ್ಲಿ ಸರಕಾರ ವಿಧಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಲಾಗುತ್ತಿದ್ದು, ಕ್ರಮಕ್ಕೆ ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಮದ್ಯದ ಅಂಗಡಿ ಮೇಲೆ ಸೂಕ್ತ ಕ್ರಮವಾಗದೇ ಇರುವುದರಿಂದ ಹೆಚ್ಚಿನ ಬೆಲೆಗೆ ಮದ್ಯ ಮಾರುವುದು ನಿರಂತರವಾಗಿ ಮುಂದುವರಿದಿದೆ.
‘ಮದ್ಯದ ಅಂಗಡಿಗಳಲ್ಲಿ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆ ತಗೋಳ್ತಾರೆ. ಪ್ರಶ್ನೆ ಮಾಡಿದರೆ ನಾವು ಕೋಡೋದೆ ಇಷ್ಟಕ್ಕೆ, ಯಾರಿಗಾದ್ರೂ ಹೇಳಿ ಕೊಳ್ಳಿ, ದೂರಾದ್ರು ಕೊಡಿ, ಮನವಿನಾದ್ರು ಕೊಡಿ, ನಾವು ಇದೇ ಬೆಲೆಗೆ ಮಾರೋದು ಎಂದು ಗ್ರಾಹಕರಿಗೆ ಸಮಜಾಯಿಷಿ ನೀಡುವುದು ನಡೆದಿದೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು’ .
ವರದಿ ರಾಜು ಮುಂಡೆ