ಹೊಸೂರು ಗ್ರಾಮದ ವಿದ್ಯಾರ್ಥಿಗಳಿಂದ ೧೩ ನೇ ವರ್ಷದ ಸ್ನೇಹ ಸಮ್ಮೇಳನ ಕಾರ್ಯಕ್ರಮ ನಡೆಸಲಾಯಿತು.
ಹಾವೇರಿ : ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಸರಸ್ವತಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳಿಂದ ೧೩ ನೇ ಸಾಲಿನ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಹೊಸೂರು ಗ್ರಾಮದ ಗುರು ಹಿರಿಯರು ಭಾಗಿಯಾಗಿದ್ದು ಅದರ ಜೊತೆಗೆ ಶಾಲೆಯ ಶಿಕ್ಷಕರು ಮತ್ತು ಶಿಕ್ಷಕಿಯರು ಕೂಡ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಗಢಾದ್ ಮಾತನಾಡಿ ಅಡಿಗೆ ಕೆಟ್ಟರೆ ಒಂದು ದಿನ ಉಪವಾಸ ಇರಬಹುದು ಹೊಲದಲ್ಲಿ ಬೆಳೆ ನಾಶವಾದರೆ ಒಂದು ವರ್ಷ ಜೀವನ ಕಷ್ಟವಾಗಬಹುದು ಹಾಗೆ ವಿದ್ಯಾರ್ಥಿಗಳು ವಿದ್ಯಯಿಂದ ವಂಚಿತರಾದರೆ ಜೀವನ ಪರ್ಯಂತ ಪರದಾಡಬೇಕಾಗುತ್ತದೆ ಎಂದು ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಾಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ವಿದ್ಯಾರ್ಥಿ ಜೀವನದಲ್ಲಿ ಎಷ್ಟು ಮುಖ್ಯವೋ ಹಾಗೆ ಪಠ್ಯೇತರ ಚಟುವಟಿಕೆಗಳು ಕೂಡ ಅಷ್ಟೇ ಮುಖ್ಯವೆಂದು ಈ ಉತ್ತಮವಾದ ವಿದ್ಯಾರ್ಥಿ ಜೀವನದ ಬಗ್ಗೆ ಅರಿವು ಮೂಡಿಸಿದರು.
ವರದಿ : ರಮೇಶ್ ತಾಳಿಕೋಟಿ




