Ad imageAd image

ಕರ್ನಾಟಕ ಶಾಲಾ ಪ್ರವೇಶಕ್ಕೆ ವಯೋಮಿತಿ ನಿಗದಿ : LKG 4 ವರ್ಷ, UKG 5 ವರ್ಷ ಕಡ್ಡಾಯ.!

Bharath Vaibhav
ಕರ್ನಾಟಕ ಶಾಲಾ ಪ್ರವೇಶಕ್ಕೆ ವಯೋಮಿತಿ ನಿಗದಿ : LKG 4 ವರ್ಷ, UKG 5 ವರ್ಷ ಕಡ್ಡಾಯ.!
WhatsApp Group Join Now
Telegram Group Join Now

ಬೆಂಗಳೂರು : 2025-26ನೇ ಶೈಕ್ಷಣಿಕ ವರ್ಷದಿಂದ ಎಲ್.ಕೆ.ಜಿ. ಅಥವಾ ತತ್ಸಮಾನ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿರುವ ಮತ್ತು ಯು.ಕೆ.ಜಿ ಅಥವಾ ಪಪ್ಪಮಾನ ದಾಖಲಾತಿಗೆ 5 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳತಕ್ಕದ್ದು ಎಂದು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದ.

ವಿಷಯಾಯವಾಗಿ, ರಾಜ್ಯ ನೀತಿ ಆಯೋಗದ ಶಿಫಾರಸು / ಅಭಿಪ್ರಾಯವನ್ನು ಪರಿಗಣಿಸಿ ಸರ್ಕಾರದ ಆದೇಶ ಸಂಖ್ಯೆ : ಇಪಿ 250 ಪಿಜಿಸಿ 2021, ದಿನಾಂಕ: 26.07.2022ರಲ್ಲಿ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ 5 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿರುವುದಕ್ಕೆ ಒಂದು ಬಾರಿಯ ಕ್ರಮವಾಗಿ ಸಡಿಲಿಕೆಯನ್ನ ನೀಡಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವ ಕಾರಣಗಳಿಂದ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಹಾಗೂ ಜೂನ್ 1ನೇ ತಾರೀಖಿಗೆ 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು 2025 26ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿಗೊಳಿಸಿ ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು ಆದೇಶಿಸಿದ.

ಮುಂದುವರೆದು, 2026 27ನೇ ಶೈಕ್ಷಣಿಕ ವರ್ಷದಿಂದ ಜೂನ್ ಒಂದನೇ ವಾರೀಲಿಗೆ 06 ವರ್ಷಗಳು ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ಒಂದನೇ ತರಗತಿಗೆ ದಾಖಲಿಸಿಕೊಳ್ಳತಕ್ಕದ್ದು ಮತ್ತು ಸರ್ಕಾರದ ಆದೇಶ ಸಂಖ್ಯೆ : ಇಪಿ 100 ಪಿಜಿಸಿ 22024 ದಿನಾಂಖ 26.06.2024 ರಲ್ಲಿ ಈಗಾಗಲೇ ಎಲ್ ಕೆಜಿ ಪ್ರವೇಶಾತಿಗೆ 4 ವರ್ಷ ಮತ್ತು ಯು.ಕೆ.ಜಿ ಪ್ರವೇಶಾತಿಗೆ 5 ವರ್ಷಗಳ ಕನಿಷ್ಠ ವಯೋಮಿತಿ ನಿಗಧಿಪಡಿಸಲಾಗಿರುತ್ತದೆ.

ಅದರಂತೆ 2025-26ನೇ ಶೈಕ್ಷಣಿಕ ವರ್ಷದಿಂದ ಎಲ್‌.ಕೆ.ಜಿ. ಅಥವಾ ತತ್ಸಮಾನ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿರುವ ಮತ್ತು ಯು.ಕೆ.ಜಿ ಅಥವಾ ಪದ್ಮಮಾನ ದಾಖಲಾತಿಗೆ 5 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನ ಮಾವು ದಾಖಲಿಸಿಕೊಳ್ಳತಕ್ಕದ್ದು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!